ಗದಗ

ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 24
ವಿಶ್ವದಲ್ಲಿ ಭಾರತೀಯ ಸಂಸ್ಕೃತಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ವ ಭಾರತೀಯರು ಭಾತೃತ್ವದ ನೆಲಗಟ್ಟಿನ ಮೇಲೆ ಧಾರ್ಮಿಕ ಸಂಸ್ಕೃತಿ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ಯಾಟಿ ಧರ್ಮರ ಮಠದ ಸಕ್ರಪ್ಪಜ್ಜನವರು ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮದಲ್ಲಿ ಈಚೆಗೆ 1001 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಧಾರ್ಮಿಕ ಕಾರ್ಯಗಳು ಮೇಲಿಂದ ಮೇಲೆ ನೆರವೇರುವುದರಿಂದ ಸಾಮರಸ್ಯದ ಬದುಕು ಕಾಣಲು ಸಾಧ್ಯ. ಜತೆಗೆ ಮನೆ, ಮನದಲ್ಲಿ ಶಾಂತಿ ನೆಮ್ಮದಿ ಲಭಿಸುತ್ತದೆ. ಈ ನಿಟ್ಟಿನಲ್ಲಿ ಭಕ್ತರು ವೃತ್ತಿ ಕಾಯಕದಲ್ಲಿ ಶ್ರದ್ಧೆ ಕಾಯ್ದುಕೊಂಡು ಸನಾತನ ಸಂಸ್ಕೃತಿ, ಧರ್ಮಾಚರಣೆ ಸಂರಕ್ಷಣೆಗೆ ಶ್ರಮಿಸಬೇಕು ಎಂದರು. ಗುಳಗುಳಿಯ ಶಾಂತವೀರ ಶ್ರೀಗಳು ಮಾತನಾಡಿ, ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಸಹ ಸತ್ಕಾರ್ಯಕ್ಕೆ ಹೆಚ್ಚಿನ ಬೆಲೆಯಿದೆ ಎಂಬುದು ಅರಿತುಕೊಳ್ಳಬೇಕು. ನೋಡಲು ಸುಂದರನಾದ ಮನುಷ್ಯನ ಮನದಲ್ಲಿನ ರಾಕ್ಷಸಿ ಪ್ರವೃತ್ತಿ ಗುಣಕ್ಕೆ ತಿಲಾಂಜಲಿ ನೀಡಿ ನೈಜತೆಗೆ ಆದ್ಯತೆ ನೀಡಿದಾಗ ಆಂತರಿಕ ಸೌಂದರ್ಯ ಸದಾಕಾಲ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ರಾಷ್ಟ್ರದ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ತೊಡಿ ಎಂದರು.
ಇದೇ ಸಂದರ್ಭದಲ್ಲಿ 1001 ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಗ್ರಾಪಂ ಅಧ್ಯಕ್ಷೆ ಗೀತಾಬಾಯಿ ಕುಲಕರ್ಣಿ, ಉಪಾಧ್ಯಕ್ಷ ಚಂದಪ್ಪ ಗುಡದೂರ, ಬಸವರಾಜ ಕೌಜಗೇರಿ, ಶರಣಪ್ಪ ಕುಂಬಾರ, ಹನುಮಂತಪ್ಪ ಬಂಡಿವಡ್ಡರ, ಶಿವಪ್ಪ ಮಾದರ, ಮೌನೇಶ ಪತ್ತಾರ, ಬಸವರಾಜ ನವಲಗುಂದ, ಭೀಮಪ್ಪ ಬೇವಿನಮರದ, ನಿಂಗಪ್ಪ ಬೇವಿನಮರದ, ಪಿ.ಎಂ. ಆದಿ, ಶಾಂತಪ್ಪ ಬೇವಿನಮರದ, ಶಂಕ್ರಪ್ಪ ನಾಯ್ಕರ, ಬಸನಗೌಡ ಗೌಡ್ರ, ರಾಜು ಮಾಲಗಿತ್ತಿ, ಮಲ್ಲಯ್ಯ ವಸ್ತ್ರದ, ಬಸವರಾಜ ಸೂಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.