ಗದಗ

ಶ್ರೇಷ್ಠ ವಚನಕಾರ ಜೇಡರ ದಾಸಿಮಯ್ಯ: ಅಸುಂಡಿ

Published On :

ಗದಗ: ಜೇಡರ ದಾಸಿಮಯ್ಯ ಶ್ರೇಷ್ಠ ವಚನಕಾರರು ಎಂದು ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರಕಾಶ ಅಸುಂಡಿ ಹೇಳಿದರು.
ಅವರು ಈಚೆಗೆ ನಗರದ ತಾಪಂ ಆವರಣದ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೋಕಕಲ್ಯಾಣ ಸಾಧಿಸುತ್ತಾ ವಚನಗಳ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುತ್ತಾ ಆಧ್ಯಾತ್ಮ ಚಿಂತನೆ, ನಿರ್ಮಲ ಭಕ್ತಿಯಿಂದ ಕಾಯಕ ಮಾಡಿ ಅದರಲ್ಲಿ ಕೈಲಾಸ ಕಂಡ ಮಹಾಶರಣ ಜೇಡರ ದಾಸಿಮಯ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಮಾತನಾಡಿದರು. ನರೇಗಲ್ಲಿನ ಕವಿ, ಶಿಕ್ಷಕ ಜೆ.ಎ.ಪಾಟೀಲ ಸ್ವರಚಿತ ಕವನ ವಾಚಿಸಿದರು. ಕ.ವಿ. ಕುಂದಗೋಳ, ಅ.ದ. ಕಟ್ಟಿಮನಿ, ವಾಸು ಟಿಕಾನದಾರ, ಬಸವರಾಜ ವಾರಿ, ವಿ.ಬಿ. ಪಠಾಣಿ, ಎಸ್.ಬಿ. ಕಣಗಿನಹಾಳ, ಎಸ್.ಎಸ್. ನರೇಗಲ್ಲ, ವೀರೇಶ ಭೂತಾನವರ, ರತ್ನಕ್ಕ ಪಾಟೀಲ, ನಿಂಗನಗೌಡ ಹಿರೇಸಕ್ಕರಗೌಡ, ಶಂಕ್ರಪ್ಪ ತೊಂಡಿಹಾಳ, ಎಚ್.ಟಿ. ಸಂಜೀವಸ್ವಾಮಿ, ಸುಚಿತ್ ಹರಿವಾಣ ಮುಂತಾದವರು ಪಾಲ್ಗೊಂಡಿದ್ದರು.
ಗಂಗಮ್ಮ ಹೂಗಾರ ಹಾಗೂ ರೇಣಕ್ಕ ರಾಮನಗೌಡ ಪ್ರಾರ್ಥಿಸಿದರು. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.