ಕಾರ್ಮಿಕರು ಒಗ್ಗಟ್ಟು, ಸೌಹಾರ್ದಕ್ಕೆ ಮುಂದಾಗಿ
ಗದಗ: ಕಾರ್ಮಿಕರು ಒಗ್ಗಟ್ಟು ಮತ್ತು ಸೌಹಾರ್ದತೆಗೆ ಹೆಚ್ಚು ಒತ್ತು ನೀಡಬೇಕು. ಕಾರ್ಮಿಕರ ಶ್ರಮದ ಬದುಕು ಅವರ ಜೀವನದಲ್ಲಿ ನೆಮ್ಮದಿ ತರುವಂತಾಗಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ಗದಗ-ಬೆಟಗೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರೆಂದರೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಿಗಿರುವವರು ಎಂದರ್ಥ. ಕಾರ್ಮಿಕರ ಪರಿಶ್ರಮದ ಬೆವರಿಗೆ, ಅವರು ಸುರಿಸುವ ರಕ್ತದ ತ್ಯಾಗಕ್ಕೆ ತಕ್ಕ ಪ್ರತಿಫಲ ದೊರೆಯಬೇಕಿದೆ ಎಂದರು.
ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯತ್ವದ ಕಾರ್ಡ್ ವಿತರಣೆ ಮಾಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸೊರಟೂರಿನ ಫಕ್ಕೀರೇಶ್ವರ ಸ್ವಾಮೀಜಿ ಹಿರೇಮಠ, ಸಮಾಜ, ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹತ್ತು ಹಲವು ಸಮಸ್ಯೆಗಳ ಮಧ್ಯದಲ್ಲಿಯೂ ಕಷ್ಟಪಡುವ ಕಾರ್ಮಿಕರನ್ನು ನಾವಿಂದು ಗೌರವಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಎಂ.ಐ. ನವಲೂರ ವಹಿಸಿದ್ದರು. ಗದಗ ಬೆಟಗೇರಿ ನಗರಸಭೆಯ ಉಪಾಧ್ಯಕ್ಷ ಕೃಷ್ಣಾ ಪರಾಪುರ, ಸಾಧಿಕ್ ನರಗುಂದ, ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಉಪಾಧ್ಯಕ್ಷ ಯೇಸುಜಾನ್ ಶೌರಿ, ಖಜಾಂಚಿ ಫಿರೋಜ್ ಹಬ್ಬುನವರ, ಕಾರ್ಪೆಂಟರ್ ಸಂಘದ ಅಧ್ಯಕ್ಷ ಭೀಮಸಿ ಪೂಜಾರ, ಬಾರ್ ಬೆಂಡರ್ ಸಂಘದ ಅಧ್ಯಕ್ಷ ರೀಯಾಜ್ ಡಂಬಳ, ಟೈಲ್ಸ್ ಸಂಘದ ಅಧ್ಯಕ್ಷ ಮೈಬೂಬಖಾನ್ ಪಠಾಣ, ಪೆಂಟರ್ ಸಂಘದ ಅಧ್ಯಕ್ಷ ಶೇಖಪ್ಪ ಶಿಶುವಿನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಜುನೇದ ಉಮಚಗಿ ಸ್ವಾಗತಿಸಿದರು, ಶರೀಫ ಯಾದಗಿರಿ ಪರಿಚಯಿಸಿದರು. ನಿಸ್ಸಾರಅಹ್ಮದ್ ನಿರೂಪಿಸಿ ವಂದಿಸಿದರು. ಕಟ್ಟಡ ನಿರ್ಮಾಣ ಕಾರ್ಮಿಕರ ಪತ್ತಿನ ಸಹಕಾರಿ ಸಂಘದ ಬಳಿ ಸಂಘಟಿಕರಾದ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

