ಗದಗ

ಗಂಜಿ ಬಸವೇಶ್ವರ ಕಲ್ಯಾಣ ಮಂಟಪಕ್ಕೆ ಅನುದಾನ

Published On :


ಕನ್ನಡಪ್ರಭ ವಾರ್ತೆ, ಗದಗ, ಮೇ 3
ನಗರದ ಗಂಜಿ ಬಸವೇಶ್ವರ ದೇವಸ್ಥಾನವು ಭವ್ಯ ಇತಿಹಾಸ ಹೊಂದಿದ್ದು, ಎಲ್ಲ ಜನಾಂಗಗಳನ್ನು ಒಗ್ಗೂಡಿಸಿಕೊಂಡು ಜಾತ್ರೋತ್ಸವ ಆಚರಿಸುತ್ತಾ ಬಂದಿದೆ. ಈ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂಟಪ ನಿರ್ಮಿಸಲು ಶಾಸಕರ ಅನುದಾನ ಒದಗಿಸಿಕೊಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ಉಸುಗಿನಗಟ್ಟಿ ಓಣಿಯ ಗಂಜಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಫಕ್ಕೀರೇಶ್ವರ ಶ್ರೀಗಳು ಮಾತನಾಡಿ, ಗಂಜಿ ಬಸವೇಶ್ವರ ವೃತ್ತದ ಮುಂಭಾಗದಲ್ಲಿ ಬಸವ ಮಂಟಪ ನಿರ್ಮಾಣವಾಗಿದ್ದು, ಮುಂದಿನ ವರ್ಷ ಕಲ್ಯಾಣ ಮಂಟಪ ನಿರ್ಮಾಣವಾಗಲಿ. ಓಣಿಯ ಹಿರಿಯರು ಯುವಕರು ಒಂದುಗೂಡಿ ದೇವರ ಸೇವೆ ಮಾಡಿದರೆ ಸತ್ಫಲ ದೊರೆಯುತ್ತದೆ. ದುಶ್ಚಟಗಳನ್ನು ತ್ಯಜಿಸಿ ತಂದೆ-ತಾಯಿ ತಂಗಿ ತಮ್ಮಂದಿರ ಸಹಬಾಳ್ವೆಯನ್ನು ಮರೆಯಬೇಡಿರಿ ಎಂದರು.
ಉಪನ್ಯಾಸಕಿ ಕವಿತಾ ದಂಡಿನ ಮಾತನಾಡಿ, ಗಂಜಿ ಬಸವೇಶ್ವರ ದೇವಸ್ಥಾನವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಮಹಿಳಾ ಸಬಲೀಕರಣಗೊಂಡು ಜಾಗೃತಗೊಳ್ಳುವುದು ಅವಶ್ಯಕವಾಗಿದೆ ಎಂದರು.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಉಳವಪ್ಪ ಹೊಂಬಳ ಮಾತನಾಡಿ, ಗಂಜಿ ಬಸವಣ್ಣನ ಕಲ್ಯಾಣ ಮಂಟಪವಾಗುವುದು ನನ್ನ ಕನಸಾಗಿದೆ. ಎಲ್ಲ ಯುವಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆಯ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ನಗರಸಭೆಯ ಉಪಾಧ್ಯಕ್ಷ ಕೃಷ್ಣಾ ಪರಾಪುರ ಮಾತನಾಡಿದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ಎನ್. ಬಳ್ಳಾರಿ, ಶಿವಲೀಲಮ್ಮ ಕುರಡಗಿ, ರುದ್ರಮ್ಮ ಕೆರಕಲಮಟ್ಟಿ, ಕೃಷ್ಣಾ ಪರಾಪುರ, ಮನೋಜ ಬಾಫಣಾ ಅವರನ್ನು ಸನ್ಮಾನಿಸಲಾಯಿತು. ರಾಮಣ್ಣ ಫಲದೊಡ್ಡಿ, ಈರಣ್ಣ ಕರಭಿಷ್ಠಿ, ಜಯದೇವ ಮೆಣಸಗಿ, ಕಮಲಾಕ್ಷಮ್ಮ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಜಿ.ಬಿ. ಹಾವಣಗಿ ಸ್ವಾಗತಿಸಿದರು. ಗುರುಶಾಂತ ವಸ್ತ್ರದ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.