ಗದಗ

ಗಜೇಂದ್ರಗಡದಲ್ಲಿ ಹೆಚ್ಚಿದ ಬಿಸಿಲಿನ ತಾಪ

Published On :

 ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 5
ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪಮಾನ ಗರಿಷ್ಠ ದಾಖಲೆಗೇರಿದೆ. ಜತೆಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನ ಪರಿತಪಿಸುತ್ತಿದ್ದಾರೆ. ಈ ಪರಿಣಾಮ ಜನರು ನೀರಿನ   ದಾಹ ನೀಗಿಸಲು ಅರವಟಿಗೆಗೆ ಮೊರೆ    ಹೋಗಿದ್ದಾರೆ.
ಪಟ್ಟಣಕ್ಕೆ ಸುತ್ತಲಿನ ಗ್ರಾಮಗಳಿಂದ ಆಗಮಿಸುವ ಜನರು ಬಿಸಿಲಿಗೆ ಸುಸ್ತಾಗಿ ನೀರಿನ ಭವಣೆಯಿಂದ ಬಳಲುತ್ತಿರುವುದನ್ನು ಅರಿತ ಪಟ್ಟಣದ ಶ್ಯಾಮಿಯಾನ್ ಸಪ್ಲಾಯರ್ಸ್ ಮಾಲೀಕ ಗುಲಾಂ ಅಹ್ಮದ ಮುಜಾವರ ಎಂಬ ಯುವಕನು ನಿತ್ಯ ಸಾವಿರಾರು ರು. ಖರ್ಚು ಮಾಡಿ ಪಟ್ಟಣದ ಹಲವು ಭಾಗಗಳಲ್ಲಿ ನೀರಿನ ಅರವಟಿಗೆ ಪ್ರಾರಂಭಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಮುಜಾವರ ತನ್ನ ಸ್ನೇಹಿತರ ಸಹಕಾರದಿಂದ ಕಳೆದೊಂದು ತಿಂಗಳಿಂದ ಪಟ್ಟಣದ ಕೊಳ್ಳಿಯವರ ಕತ್ರಿ, ಭಜರಂಗ ದಳ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತ, ಬಸ್ ಸ್ಟ್ಯಾಂಡ್ ಬಳಿ  ಮಣ್ಣಿನ ಹರಿವೆಗಳನ್ನಿಟ್ಟು ಜನತೆಗೆ ಶುದ್ಧ ಕುಡಿಯುವ ನೀರಿನ ಅರವಟಿಗೆ ತೆರೆಯುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪುರಸಭೆ ಆಡಳಿತಕ್ಕೆ ಛೀಮಾರಿ:
ಜಿಲ್ಲೆಯ ಮುಖ್ಯ ವಾಣಿಜ್ಯನಗರಿ ಖ್ಯಾತಿಯ ಪಟ್ಟಣಕ್ಕೆ ನಿತ್ಯ ಸಹಸ್ರಾರು ಜನ ಬಂದು ತೆರಳುತ್ತಾರೆ. ಆದರೆ, ಕಾಲಕಾಲೇಶ್ವರ ವೃತ್ತ ಸೇರಿದಂತೆ ಎಲ್ಲಿ ಹುಡಕಿದರೂ ನೆರಳು ನೀಡುವ ಒಂದು ಮರವೂ ಇಲ್ಲ. ಕುಡಿಯಲು ನೀರು ಬೇಕಾದರೆ ಹಣ ಕೊಟ್ಟು ಖರೀದಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಪುರಸಭೆ ಅಲ್ಲಲ್ಲಿ ನೀರಿನ ಅರವಟಿಗೆ ತೆಗೆಯಲು ಮುಂದಾಗದಿರುವ ಸಾರ್ವಜನಿಕರ ಆಕ್ರೋ ಶಕ್ಕೆ ಕಾರಣವಾಗಿದೆ.
ಪುರಸಭೆ ಪಟ್ಟಣದ ಜನತೆಗೆ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಇಂತಹದ್ದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟಿಗೆ ತೆಗೆವುದೆಂದರೆ ಹಾಸ್ಯಾಸ್ಪದದ ಮಾತಿದು ಎಂದು ಜನತೆ ಪುರಸಭೆ ಆಡಳಿತ ಕಾರ್ಯ ವೈಖರಿ ಬಗ್ಗೆ ಛೀಮಾರಿ ಹಾಕುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.