ಗದಗ

ವಿವಾಹ ನೋಂದಣಿ ಪ್ರಮಾಣಪತ್ರ ಕಡ್ಡಾಯ ಕ್ರಮ ಖಂಡನೀಯ: ಗೌಡರ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 5
ಈ ಹಿಂದೆ ಬಿಜೆಪಿ ಸರ್ಕಾರ ಬಡವರ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಂತಹ ಜನಪ್ರಿಯ ಯೋಜನೆಯನ್ನು ಪ್ರಸ್ತುತ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರಿಗೆ ತೊಂದರೆಯಾಗುವಂತೆ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಕಡ್ಡಾಯ ಮಾಡಿದ ಕ್ರಮ ಖಂಡನೀಯ ಕೂಡಲೇ ರದ್ದುಪಡಿಸಬೇಕು ಎಂದು ರಾಜ್ಯ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿರುವ ಭಾಗ್ಯಲಕ್ಷ್ಮೀ ಯೋಜನೆಯಿಂದ ಲಕ್ಷಾಂತರ ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗಿದೆ. ಇಂಥ ಜನಪರ ಯೋಜನೆಯನ್ನು ಇಂದು ಗೊಂದಲದ ಗೂಡಾಗಿ ಪರಿಣಮಿಸಲಾಗುತ್ತಿದೆ. ನಮ್ಮಲ್ಲಿ ಬಹುತೇಕವಾಗಿ ಎಲ್ಲ ಜಾತಿ-ಜನಾಂಗದಲ್ಲಿಯೂ 100ಕ್ಕೆ 100ರಷ್ಟು ಸಾಂಪ್ರದಾಯಕ ಮದುವೆಗಳಾಗುತ್ತಿವೆ. ಇಂದು ಭಾಗ್ಯಲಕ್ಷ್ಮೀ ಬಾಂಡ್ಗಾಗಿ ಮದುವೆ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಿರುವುದು ಸರ್ಕಾರದ ತುಘಲಕ್ ನೀತಿಯಾಗಿದೆ ಎಂದರು.
ಸರ್ಕಾರ ಹೊಸ ನೀತಿ-ನಿಯಮಗಳನ್ನು ರೂಪಿಸುವಾಗ ಅದರ ಸಾಧಕ-ಬಾಧಕಗಳ ಅರಿತು ಜಾರಿಗೆ ತರುವಂತಾಗಬೇಕು. ಒಬ್ಬ ಮಹಿಳೆ ಗರ್ಭಿಣಿಯಾದ ಬಗ್ಗೆ ಸ್ಥಳೀಯ ಅಂಗನವಾಡಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಅವಳ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಅವರಿಗೆ ಮದುವೆ ನೋಂದಣಿ ಪ್ರಮಾಣ ಪತ್ರ ಕಡ್ಡಾಯ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಏಕೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದ ಗೌಡರ್, ಈ ಹಿಂದೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ನಂತರ ಅವುಗಳ ಕುರಿತು ಜನತೆಯಿಂದ ವಿರೋಧ ವ್ಯಕ್ತವಾಯಿತು. ಆದ್ದರಿಂದ ಈ ಗೊಂದಲ ತಪ್ಪಿಸಬೇಕಾದರೆ ಮೊದಲು ಸಾರ್ವಜನಕರಿಗೆ ಕಾನೂನಿನ ಕುರಿತು ತಿಳಿವಳಿಕೆ ನೀಡಿ ನಂತರ ಅವುಗಳನ್ನು ಜಾರಿಗೆ ತರಲಿ.
ಸರ್ಕಾರ ಕೂಡಲೇ ಹೊಸ ನಿಯಮ ರದ್ದುಗೊಳಿಸಿ, ಈ ಹಿಂದಿನ ಸರ್ಕಾರ ನೀಡುವ ರೀತಿಯಲ್ಲಿಯೇ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ನೀಡಬೇಕು. ಇಲ್ಲದಿದ್ದರೆ ಮೇ 12ರಂದು ಮುಂಡರಗಿಯಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ನೀಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಈ ಸಂದರ್ಭ ಎ.ಕೆ. ಬೆಲ್ಲದ, ಈಶ್ವರಪ್ಪ ಹಂಚಿನಾಳ, ರಾಮಚಂದ್ರ ಗಾರವಾಡ ಉಪಸ್ಥಿತರಿದ್ದರು.


ಬಸ್ ದರ ಏರಿಕೆ
ಖಂಡಿಸಿ
ಟೈರ್ಗೆ ಬೆಂಕಿ


ಗದಗ:  ರಾಜ್ಯ ಸರ್ಕಾರ ಬಸ್ ದರ ಏರಿಸಿದ್ದನ್ನು ಖಂಡಿಸಿ ಸೋಮವಾರ ಬೆಟಗೇರಿ ಭಾಗದ ಬಿಜೆಪಿ   ಕಾರ್ಯಕರ್ತರು ಬೆಟಗೇರಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮತದಾರರನ್ನು ವಂಚಿಸುವಲ್ಲಿ ಹಾಗೂ ಬೆಲೆ ಏರಿಕೆಯಲ್ಲಿ ಸಾಧನೆ ಗೈದಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ಧಂತೆಯೇ ತನ್ನ ಬೆಲೆ ಏರಿಸುವ ಪ್ರವೃತ್ತಿ ಕಾಂಗ್ರೆಸ್ ಸರ್ಕಾರ ಮುಂದುವರೆಸಿದ್ದು, ಬಸ್ ದರ ಏರಿಕೆ ಸಂದರ್ಭದಲ್ಲಿ ಐಶಾರಾಮಿ ಬಸ್ ದರಗಳನ್ನು ಏರಿಸದೆ ಜನಸಾಮಾನ್ಯರಿಗೆ ಹೊರೆಯಾಗುವ ಸಾಮಾನ್ಯ ಬಸ್ ದರ ಏರಿಕೆ ಮಾಡಿದ್ಧ್ದು ಜನಸಾಮಾನ್ಯ ವಿರೋಧಿಯಾಗಿದೆ. ಸರ್ಕಾರ ತಕ್ಷಣ ದರ ಏರಿಕೆ ಕೈಬಿಡುವಂತೆ ಬಿಜೆಪಿ ಘಟಕ ಆಗ್ರಹಿಸುತ್ತದೆ ಎಂದರು.
 ಮುಖಂಡ ಶ್ರೀನಿವಾಸ ಹುಬ್ಬಳ್ಳಿ ನಗರಸಭೆ ಸದಸ್ಯ ಶ್ರೀನಿವಾಸ ಕರಿ, ನಾಗಲಿಂಗ ಐಲಿ, ಪ್ರೇಮನಾಥ ಬಣ್ಣದ, ಯಲ್ಲಪ್ಪ ಕಾಂಬ್ಳೆಕರ, ಚಿನ್ನಪ್ಪ ನೆಗಳೂರ, ಶಿವಾಜಿ ಕಾಂಬ್ಳೇಕರ, ಪ್ರಕಾಶ ಇಂಡಿ, ಡಿ.ಆರ್. ಪರಕಾಳಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.