ಬಸವೇಶ್ವರ ಸಂದೇಶ ಸರ್ವಕಾಲಕ್ಕೂ ಶೇಷ್ಠ
ಗದಗ: ಅಮಾನವೀಯ ಅನಿಷ್ಟ ಪದ್ಧತಿಗಳನ್ನು ಕ್ರಾಂತಿಕಾರಕ ಹೋರಾಟ ಮಾಡಿ ಸಮಾನತೆ ತಂದುಕೊಟ್ಟ ಬಸವೇಶ್ವರರ ಸಂದೇಶಗಳು ಸರ್ವಕಾಲಕ್ಕೂ ಸರ್ವಶ್ರೇಷ್ಠವಾಗಿವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಫ್ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಲಿಂಗದಾಳ ಹೇಳಿದರು.
ಅವರು ಸ್ಥಳೀಯ ರಾಜೀವಗಾಂಧಿ ನಗರದಲ್ಲಿ ಗೌತಮ ಬುದ್ಧ ಸೇವಾ ಸಮಿತಿ, ದಲಿತ ಯುವ ಸೇನಾ ಸಮಿತಿ ಹಾಗೂ ರಾಜೀವಗಾಂಧಿ ಯುವಕ ಮಂಡಳಿಯ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಸವೇಶ್ವರು 12ನೇ ಶತಮಾನದಲ್ಲಿ ಅಂತರ್ ಜಾತಿ ವಿವಾಹವನ್ನು ಪ್ರಪ್ರಥಮರಾಗಿ ಮಾಡಿ ಕ್ರಾಂತಿಕಾರಿಗಳಾದರು. ಕಾಯಕವೇ ಕೈಲಾಸ ಎಂದು ಕಾಯಕದಲ್ಲಿ ದೇವರನ್ನು ಕಾಣುವಂತೆ ಸಮುದಾಯವನ್ನು ತಿದ್ದಿ, ದೇವರು ದಿಂಡಿರುಗಳ ವೈದಿಕ ಆಚರಣೆ ನಿಲ್ಲಿಸಿದರು. ಆದರೆ, ಇಂದು ಪ್ರಜಾಪ್ರತಿನಿಧಿ ಕಾನೂನುಗಳು ಇದ್ದರೂ ಅಮಾನವೀಯ ಅಚರಣೆಗಳು ಇನ್ನೂ ನಡೆಯುತ್ತಿವೆ. ಮೂಢನಂಬಿಕೆ, ಅಜ್ಞಾನ ಸಮಾಜದಲ್ಲಿ ಜೀವಂತ ಇದ್ದು, ಎಲ್ಲ ಸಮಾನತೆಯ ಹರಿಕಾರರು, ಸಮಾಜ ಸುಧಾರಕರು ಬುದ್ಧ-ಬಸವ-ಅಂಬೇಡ್ಕರರ ಚಿಂತನೆಗಳನ್ನು ಸಮಾಜಕ್ಕೆ ಮುಟ್ಟಿಸಿ, ಜಾಗೃತಿ ಮೂಡಿಸಿ, ನವ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಕಾರ್ಯ ನಿರಂತರ ನಡೆಯಬೇಕಾಗಿದೆ ಎಂದರು.
ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ ಮುಳಗುಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬುದ್ಧ- ಬಸವ ಸಮಾಜ ಸುಧಾರಣೆಯ ಕಾನೂನುಗಳನ್ನು ಸಂವಿಧಾನದಲ್ಲಿ ಡಾ. ಅಂಬೇಡ್ಕರರು ಅಳವಡಿಸಿದ್ದಾರೆ ಎಂದರು. ದಲಿತ ಮುಖಂಡ ಎಲ್. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ, ಜಿಲ್ಲಾ ಡಿಎಸ್‌ಎಸ್ ಸಂಚಾಲಕ ದೇವಪ್ಪ, ಎಸ್.ಎನ್. ಲಿಂಗದಾಳ, ಬಸವರಾಜ ಈರಣ್ಣವರ ಹಾಗೂ ಗೌತಮ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎಚ್.ಎಸ್. ಚಿಗರಿ ಮಾತನಾಡಿದರು. ರಾಜೀವಗಾಂಧಿ ಯುವಕ ಸಂಘದ ಗೌರವ ಅಧ್ಯಕ್ಷ ಬಸವರಾಜ ಬದಾಮಿ, ಅಶೋಕ ನರಗುಂದ, ಪರಶುರಾಮ ದನದಮನಿ, ಬಸವರಾಜ ಹುಣಶಿಮರದ, ಇಮಾಮಸಾಬ್ ಕಲೇಗಾರ, ಮನೋಹರ ಸಿಂಗಾಡಿ, ಬಾಲರಾಜ ಅರಬರ, ರಾಜು ದೊಡ್ಡಮನಿ, ಮಲ್ಲಿಕಾರ್ಜುನ ಗುಜ್ಜಾಯಿ, ಭೀಮಪ್ಪ ದೊಡ್ಡಮನಿ, ಅಜಯ ಲಿಂಗದಾಳ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

