ಗದಗ

ಅವಹೇಳನಕಾರಿ ಹೇಳಿಕೆ: ಕ್ರಮ ಕೈಗೊಳ್ಳಿ

Published On :

ಕಾರಟಗಿ: ಯೋಗ ಗುರು ಬಾಬಾ ರಾಮದೇವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮತ್ತು ಅಖಿಲ ಕರ್ನಾಟಕ ಏಕಲವ್ಯ ಸೇನೆ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ಸಂಘಟನೆಯ ಕೆಲ ಕಾರ್ಯಕರ್ತರು ಬುಧವಾರ ಬೆಳಗ್ಗೆ ಇಲ್ಲಿನ ವಿಶೇಷ ಎಪಿಎಂಸಿ ಆವರಣದಲ್ಲಿ ಸೇರಿ ಅಲ್ಲಿಂದ ಆರ್.ಜಿ. ಮುಖ್ಯ ರಸ್ತೆಯಲ್ಲಿ ಯೋಗಾಗುರು ಮತ್ತು ವಾಲ್ಮೀಕಿ ಯಾರು ಕೃತಿ ಲೇಖಕರ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಆರ್.ಜಿ. ರಸ್ತೆ ಮೂಲಕ ಹಳೇ ಬಸ್ ನಿಲ್ದಾಣ ಮೂಲಕ ನವಲಿ ವೃತ್ತಕ್ಕೆ ಆಗಮಿಸಿತು. ಅಲ್ಲಿ ಪ್ರತಿಭಟನಾ ಮೆರವಣಿಗೆ ಸಭೆಯಾಗಿ ಮಾರ್ಪಟ್ಟಿತು. ಪ್ರತಿಭಟನೆಯುದ್ದಕ್ಕೂ ಸಂಘಟನೆಗಳ ಕಾರ್ಯಕರ್ತರು ಬಾಬಾ ರಾಮದೇವ ಮತ್ತು ಲೇಖಕ ನಾರಾಯಣಾಚಾರ್ಯರ ವಿರುದ್ಧ ಘೋಷಣೆ ಕೂಗುವ ಮೂಲಕ ಇಬ್ಬರ ಪ್ರತಿಕೃತಿ ದಹಿಸಲಾಯಿತು.
ಚುನಾವಣೆ ಪ್ರಚಾರ ವೇಳೆ ಯೋಗಗುರು ಮಾತನಾಡಿ, ದಲಿತ ಸಮೂಹಕ್ಕೆ ಅವಮಾನಿಸಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾವಿರಾರು ಕೋಟಿ ಅಕ್ರಮ ಆಸ್ತಿ ಹೊಂದಿದ ಸನ್ಯಾಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಬಾಬಾ ರಾಮ್ದೇವ್ರ ಪತಂಜಲಿ ಯೋಗಕೇಂದ್ರಗಳನ್ನು ನಿಷೇಧಿಸಬೇಕು, ವಾಲ್ಮೀಕಿ ಯಾರು ಪುಸ್ತಕ ಬರೆದ ನಾರಾಯಣಾಚಾರ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಉಪ ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿಗೆ ಮನವಿ ಸಲ್ಲಿಸಿದರು. ಯಮನೂರಪ್ಪ ಬೆನ್ನೂರು, ಮಾರುತಿ ಹುಳ್ಕಿಹಾಳ್, ನಿಂಗಪ್ಪ, ಸೋಮನಾಥ ಹುಳ್ಕಿಹಾಳ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.