ಗದಗ

ಲಗ್ನವಾಗಿ ನಾಲ್ಕೇ ದಿನದಲ್ಲಿ ಮದುಮಗ ಮಸಣಕ್ಕೆ

Published On :

ನರಗುಂದ: ಮದುವೆಯಾಗಿ ನಾಲ್ಕು ದಿನ ಕಳೆಯುವಷ್ಟರಲ್ಲಿ ಮದುಮಗ ಮಸಣ ಸೇರಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೊಣ್ಣೂರು ಬಳಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿಯಲ್ಲಿ ನವವಿವಾಹಿತ ಶಿವಾನಂದ ಮಡಿವಾಳರ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಬಿರೋಳ್ಳಿ ಗ್ರಾಮದ ಶಿವಾನಂದ ಮಡಿವಾಳರ ಅಗಡಿ ಗ್ರಾಮದ ಬಸಪ್ಪ ಮಡಿವಾಳರ ಎಂಬವರ ಪುತ್ರಿ ಮಾಲಾರನ್ನು ಬಸವ ಜಯಂತಿ ದಿನ (ಮೇ 2) ವರಿಸಿದ್ದರು. ಮಂಗಳವಾರ ತಮ್ಮ ಸ್ವಗ್ರಾಮ ಬಿರೋಳ್ಳಿಯಿಂದ ಸಂಬಂಧಿಕರನ್ನು ಕ್ರೂಸರ್ನಲ್ಲಿ ಕರೆದುಕೊಂಡು ಬದಾಮಿ ಬನಶಂಕರಿ ದೇವಿ ದರ್ಶನಕ್ಕೆ ಬಂದಿದ್ದರು. ದೇವಸ್ಥಾನದ ಆವರಣದಲ್ಲೇ ಅಡುಗೆ ಮಾಡಿ, ಊಟ ಮುಗಿಸಿ, ರಾತ್ರಿ 11ಕ್ಕೆ ವಾಪಸ್ ಹೊರಟಿದ್ದಾರೆ. ನವದಂಪತಿ ಹಾಗೂ ಬಂಧುಗಳಿದ್ದ ಕ್ರೂಸರ್ ಕೊಣ್ಣೂರು ಬಳಿ ಲಾರಿಯೊಂದು ಅಪ್ಪಳಿಸಿದೆ. ಶಿವಾನಂದ ಸ್ಥಳದಲ್ಲೇ ಮೃತಪಟ್ಟರೆ, ವಾಹನದಲ್ಲಿದ್ದ ಇತರ 17 ಜನರು ಗಾಯಗೊಂಡಿದ್ದಾರೆ. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.