ಗದಗ

ಪಂಕ್ತಿಭೇದ ನಿಷೇಧಿಸಲು ಆಗ್ರಹಿಸಿ ಧರಣಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 8
ಉಡುಪಿಯ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಊಟಕ್ಕೆ ಕುಳಿತ ಬ್ರಾಹ್ಮಣೇತರ ಮಹಿಳೆಯೊಬ್ಬರನ್ನು ಎಬ್ಬಿಸಿ ಹೊರ ಕಳುಹಿಸಿ ಅವಮಾನ ಮಾಡಿದ ಘಟನೆ ವಿರೋಧಿಸಿ ಹಾಗೂ ಉಡುಪಿಯ ಅಷ್ಟಮಠಗಳಲ್ಲಿ ಹಾಗೂ ರಾಜ್ಯದ ಇತರ ಮಠ ಮಂದಿರಗಳಲ್ಲಿ ಜಾರಿಯಲ್ಲಿರುವ ಅಮಾನವೀಯ ಪಂಕ್ತಿಭೇದವನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಗುರುವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಪಂಕ್ತಿಭೇದ ಇದೊಂದು ಮಾನವ ಜನಾಂಗಕ್ಕೆ ಅಂಟಿದ ಮಾರಕ. ಇದನ್ನು ಪೋಷಿಸುವ ಬೆಳೆಸುವ ಪಟ್ಟಭದ್ರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ದಿಟ್ಟ ನಿರ್ಧಾರ ಸರ್ಕಾರದ ಆದ್ಯ ಕರ್ತವ್ಯ ಆಗಬೇಕಾಗಿದೆ. ಸದಾ ಹುಚ್ಚಾಟದ ಅತಿರೇಕ ಮಾಡುವ ಉಡುಪಿ ಅಷ್ಟ ಮಠಾಧೀಶರಂತಹ ಅವಿವೇಕಿಗಳ ಆಟಾಟೋಪ ನಿಲ್ಲಿಸಲು ಮುಂದಾಗಬೇಕು. ಇಲ್ಲದಿದ್ದರೆ ಕರ್ನಾಟಕದ ಸೌಹಾರ್ದ   ಪರಂಪರೆಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮಹಗುಂಡಪ್ಪ ಅಂಗಡಿ ಮತ್ತು ಪೀರು ರಾಠೋಡ ಮಾತನಾಡಿ, ಪಂಕ್ತಿಭೇದ ಪುರೋಹಿತಶಾಹಿಯ ಅತ್ಯಂತ ಅಮಾನವೀಯ ಕ್ರೂರ ಆಚರಣೆ. ಅಸ್ಪೃಶ್ಯತೆಯ ಇನ್ನೊಂದು ಮುಖ. ಮಠ ದೇವಸ್ಥಾನಗಳ ಆವರಣದಲ್ಲಿ ಪುರೋಹಿತಶಾಹಿ ಮಠಾಧೀಶರು ನಡೆಸುತ್ತಿರುವ ಈ ಅನ್ಯಾಯವನ್ನು ನಾಡಿನ ಪ್ರಜ್ಞಾವಂತರು ವಿರೋಧಿಸಬೇಕು. ಮತ್ತು ಪಂಕ್ತಿಭೇದ ಆಚರಿಸುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಾರುತಿ ಚಿಟಗಿ ಮಾತನಾಡಿ, ಸಮಾಜದಲ್ಲಿ ನಡೆಯುವ ಅನಿಷ್ಟ ಹಾಗೂ ಅಮಾನವೀಯ ಆಚರಣೆಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದರು.
ಶಿವು ಚವ್ಹಾಣ, ಹನುಮಂತ ತಾಳಿ, ಚಂದ್ರು ಕುರಿ, ಬಾಲಕೃಷ್ಣ ಜಾಡಬಂದಿ, ಈ.ಕೆ. ಬಡಿಗೇರ, ಪ್ರಕಾಶ ಹೆಳವರ, ಶಿವಾನಂದ ಬೋಸ್ಲೆ, ಬಸವರಾಜ ಬನಹಟ್ಟಿ ಮುಂತಾದವರು  ಧರಣಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.