ಬಾಳೆಗೆ ಬೆಂಕಿ ರೋಗ: ಸಂಕಷ್ಟದಲ್ಲಿ ಅನ್ನದಾತ
ಲಕ್ಷ್ಮೇಶ್ವರ: ಬಾಳೆ ಬೆಳೆಗೆ ಬೆಂಕಿ ರೋಗ ತಗುಲಿ ಬಾಳೆ ಬೆಳೆ ರೈತರ ಬಾಳಿಗೆ ಕೊಳ್ಳಿ ಇಟ್ಟಂತಾಗಿರುವುದು ನೋವಿನ ಸಂಗತಿ. ನೂರಾರು ಆಸೆಗಳನ್ನು ಇಟ್ಟುಕೊಂಡು ಸಮೀಪದ ಉಂಡೇನಹಳ್ಳಿ ಗ್ರಾಮದಲ್ಲಿ ಬಾಳೆ ಬೆಳೆದಿರುವ ನಂದೀಶ ಕಗ್ಗಲಗೌಡರ ಅವರ ಕನಸಿಗೂ ಬೆಂಕಿ ಬಿದ್ದಿದೆ. ಸುಮಾರು 6 ಎಕರೆ ನೀರಾವರಿಯ ಹೊಲದಲ್ಲಿನ ಬಾಳೆಗೆ ಬೆಂಕಿ ರೋಗ ಕಾಣಿಸಿಕೊಂಡು ಆಕಾಶ ಕಳಚಿ ಬಿದ್ದು ದಿಕ್ಕು ತೋಚದಂತಾಗಿದೆ.
ಸುಮಾರು 4 ತಿಂಗಳ ಹಿಂದೆ ಬಾಳೆ ಸಸಿಯನ್ನು ನಾಟಿ ಮಾಡಿದ್ದು 3-5 ಅಡಿ ಎತ್ತರದ ಬಾಳೆಗೆ ಬೆಂಕಿ ರೋಗ ಕಾಣಿಸಿಕೊಂಡು ಇಳುವರಿ ಕುಂಠಿತವಾಗುವ ಭೀತಿ ಉಂಟಾಗಿದೆ. ಹನಿ ನೀರಾವರಿ ಮೂಲಕ ಬಾಳೆಗೆ ನೀರನ್ನು ಉಣಿಸುತ್ತಿದ್ದು, ಬಾಳೆಯ ಬೆಳೆಯಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಬಾಳೆ ಬೆಳೆಯನ್ನು ಬೆಳೆದಿರುವುದು ರೈತರ ನೆಮ್ಮದಿ ಹಾಳು ಮಾಡಿದೆ.
ಉಂಡೇನಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಹೊಲದಲ್ಲಿ ಬಾಳೆಯನ್ನು ಬೆಳೆದಿದ್ದು ಬಹುತೇಕ ಬಾಳೆಗಳಿಗೆ ಬೆಂಕಿ ರೋಗದ ಭೀತಿ ಕಾಣಿಸಿಕೊಂಡಿದೆ. ಹಚ್ಚನೇ ಹಸರಿನಿಂದ ಕಂಗೊಳಿಸಬೇಕಾಗಿದ್ದ ಬಾಳೆಯ ಎಲೆಗಳು ಬೆಂಕಿ ರೋಗ ತಗುಲಿ ಸುಟ್ಟು ಕರಕಲಾದಂತೆ ಕಂಡು ಬರುತ್ತಿದೆ.
ಬಾಳೆಗೆ ಬೆಂಕಿ ರೋಗ ಬಿದ್ದ ಮೇಲೆ ಬಾಳೆ ಬೆಳೆಯು ಎತ್ತರವಾಗಿ ಮೇಲಕ್ಕ ಬೆಳೆಯದೆ ಕಮರಿ ಹೋಗುತ್ತಿರುವುದು ನುಂಗಲಾರದ ತುತ್ತಾಗಿದೆ. ಕೇವಲ ಬೆಂಕಿ ರೋಗವಲ್ಲದೆ ಕಾಂಡ ಕೊಳೆಯ ರೋಗವು ಬಾಳೆಯನ್ನು ಕಾಡುತ್ತಿದ್ದು ಬಾಳೆಯ ಸಸಿ, ಗೊಬ್ಬರ, ಆಳು ಹೋಳಿಗಾಗಿ ಲಕ್ಷಾಂತ ರು. ಖರ್ಚು ಮಾಡಿದ್ದು ಮುಂದಿನ ದಾರಿ ಯಾವುದು ಎಂಬುದು ತಿಳಿಯದಂತಾಗಿದೆ ಎನ್ನುವುದು ಬಹುತೇಕ ರೈತರ ಅಭಿಪ್ರಾಯವಾಗಿದೆ.
ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

