ವಿದ್ಯುತ್ ಕಣ್ಣುಮುಚ್ಚಾಲೆ: ರೈತರ ಆತಂಕ
- ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 20
ಸರ್ಕಾರ ರೈತರ ಜಮೀನುಗಳಿಗೆ 7 ಗಂಟೆ 3 ಫೇಸ್ ವಿದ್ಯುತ್ ನೀಡುವುದಾಗಿ ತಿಳಿಸಿದಾಗಿನಿಂದಲೂ ಒಂದು ಬಾರಿಯೂ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ರೈತರು ತಮ್ಮ ವಿವಿಧ ಕಾರ್ಯಚಟುವಟಿಕೆ ಬದಿಗಿಟ್ಟು ಬೆಳಗ್ಗೆಯಿಂದಲೇ ಹೊಲಕ್ಕೆ ಹೋಗಿ ಕಾಯುತ್ತ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ಮುಂಡರಗಿ ಸೇರಿದಂತೆ ತಾಲೂಕಿನ ವಿವಿಧೆಡೆ ಈಗಾಗಲೇ ಸೂರ್ಯಕಾಂತಿ, ಹತ್ತಿ ಬೀಜಗಳನ್ನು ಹಾಕಿದ್ದು, ಅವುಗಳಿಗೆ ಸಂಪೂರ್ಣವಾಗಿ ನೀರು ಬಿಡದಿದ್ದರೆ ಬಿಸಿಲಿನ ಝಳಕ್ಕೆ ಅವು ಕಮರಿ ಹೋಗುತ್ತವೆ. ಹೀಗಾಗಿ ಬೀಜ, ಗೊಬ್ಬರ, ಆಳುಗಳಿಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡಿರುವ ರೈತರು ವಿದ್ಯುತ್ಗಾಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಖಾಲಿ ಕುಳಿತು ಹೋಗಬೇಕು.
ನಿದ್ರೆಗೆಡಬೇಕು: ಕೆಲ ಬಾರಿ ಮಧ್ಯಾಹ್ನ 1 ತಾಸು, ಸಂಜೆ 2 ತಾಸು, ಇನ್ನು ಮಧ್ಯರಾತ್ರಿಯಲ್ಲಿ ಎಲ್ಲರೂ ನಿದ್ದೆಯಲ್ಲಿರುವಾಗಲೇ ವಿದ್ಯುತ್ ಸರಬರಾಜು ಮಾಡುತ್ತಿದ್ದು, ರೈತರು ಆಗಲೇ ಎದ್ದು ನೀರು ಹಾಯಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಒಂದು ವೇಳೆ ನಿದ್ದೆಯಿಂದ ಎಚ್ಚರವಾಗದಿದ್ದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ ಎಂದು ರೈತರು ತಮ್ಮ ಗೋಳು ತೋಡಿಕೊಳ್ಳುತ್ತಾರೆ.
ಪೂರೈಕೆ ಕೊರತೆ: ಸರ್ಕಾರದ ಆದೇಶದಂತೆ ಇಲಾಖೆ ಅಧಿಕಾರಿಗಳು ರೈತರ ಪಂಪ್ಸೆಟ್ಗಳಿಗೆ ನೀಡುವ 7 ತಾಸು 3 ಫೇಸ್ ವಿದ್ಯುತ್ನ್ನು ತಮಗೆ ಬೇಕಾದಾಗ ನೀಡುವ ಬದಲು ಒಮ್ಮೆಲೆ 7 ತಾಸು 3 ಫೇಸ್ ವಿದ್ಯುತ್ ನೀಡಿದರೆ ರೈತರು ಸಹಾಯವಾಗುತ್ತಿತ್ತು. ಸರ್ಕಾರ ಒಮ್ಮೆಲೆ ನಾಲ್ಕು ಗಂಟೆ ಹಗಲು, ಮೂರು ಗಂಟೆ ರಾತ್ರಿ ವಿದ್ಯುತ್ ನೀಡಿದರೆ ಬೆಳೆಗಳಿಗೆ ಸಾಕಷ್ಟು ನೀರು ಪೂರೈಕೆಯಾಗುತ್ತದೆ ಎನ್ನುತ್ತಾರೆ ರೈತ ಮಂಜಪ್ಪ ಜೋಳದ.
ತಾಲೂಕಿನಲ್ಲೇ ವಿದ್ಯುತ್ ಉತ್ಪಾದನೆ: ವಿದ್ಯುತ್ಗಾಗಿ ಬೇಡಿಕೆಯಿಟ್ಟಾಗ ವಿದ್ಯುತ್ ಕೊರತೆ ನೆಪ ಹೇಳುವ ಸರ್ಕಾರ ವಿವಿಧ ಕಂಪನಿಗಳಿಂದ ಮುಂಡರಗಿ ತಾಲೂಕಾದ್ಯಂತ ಅಳವಡಿಸಿರುವ ಗಾಳಿ ವಿದ್ಯುತ್ ಯಂತ್ರಗಳ ಸದುಪಯೋಗಪಡಿಸಿಕೊಳ್ಳುವತ್ತ ಚಿಂತನೆ ನಡೆಸಬೇಕಿದೆ. ತಾಲೂಕಿನಲ್ಲಿ ಉತ್ಪಾನೆಯಾಗುವ ಗಾಳಿ ವಿದ್ಯುತ್ ಮೊದಲು ರೈತರಿಗೆ ದೊರೆಯುವಂತೆ ಅನುಕೂಲ ಮಾಡಿಕೊಡಬೇಕು. ರೈತರ ಜಮೀನುಗಳಿಗೆ ನಿರಂತರ 7 ಗಂಟೆ 3 ಫೇಸ್ ವಿದ್ಯುತ್ ನೀಡುವಲ್ಲಿ ಸರ್ಕಾರ ಎಡವಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

