ಕೋಳಿವಾಡ ಹೇಳಿಕೆ: ಪ್ರತಿಕೃತಿ ದಹನ
ಕನ್ನಡಪ್ರಭ ವಾರ್ತೆ, ಗದಗ, ಮೇ 22
ಹಾವೇರಿ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ ಸಲೀಂ ಅಹ್ಮದ್ಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದಕ್ಕೆ ಸೋಲಾಗಿದೆ ಎಂದ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಅಲ್ಪಸಂಖ್ಯಾತರ ಸೇವಾ ಸಂಘದಿಂದ ಗುರುವಾರ ಗದಗ ಗಾಂಧಿ ವೃತ್ತದಲ್ಲಿ ಶಾಸಕರ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು.
ಸಂಘದ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿ ಸಲೀಂ ಅಹ್ಮದ್ ಗೆಲ್ಲಬಾರದೆಂದು ಸತಾಯ-ಗತಾಯ ಪ್ರಯತ್ನ ನಡೆಸಿದ್ದರು. ಹಾವೇರಿ-ಗದಗ ಕ್ಷೇತ್ರದ ಸಚಿವರು, ಶಾಸಕರ ಕುತಂತ್ರದಿಂದ ಹಾವೇರಿ, ಗದಗ ಜಿಲ್ಲೆ 7 ಶಾಸಕರು, ಸಚಿವರು, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೇಸ್ ಆಡಳಿತವಿದ್ದರೂ ಸಲೀಂ ಅಹ್ಮದ್ಗೆ ಸೋಲಾಯಿತು ಎಂದು ಆರೋಪಿಸಿದರು.
ಕಳೆದ ಬಾರಿ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿಗೆ ಬಹುಮತವಿತ್ತು. ಈ ಬಾರಿ ಕಾಂಗ್ರೆಸ್ಮಯ ಇದ್ದರೂ ಚುನಾವಣೆಯಲ್ಲಿ ಪ್ರಚಾರದ ಕೊರತೆ, ಸ್ವಹಿತಾಸಕ್ತಿಗಾಗಿ ಅಲ್ಪಸಂಖ್ಯಾತ ಸಮುದಾಯದ ಸಲೀಂ ಅಹ್ಮದ್ಗೆ ಸೋಲಾಗಿದೆ.
ಇದಕ್ಕೆ ಕಾರಣರಾದ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಮೇಲೆ ರಾಜ್ಯದ ಮುಖ್ಯಮಂತ್ರಿ, ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಅವರ ಶಾಸಕತ್ವ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ವಿರೋಧಕ್ಕೆ ಬಲಿಯಾಗಬೇಕಾಗುತ್ತದೆ ಎಂದರು.
ಜಾವೇದ್ ನೂರ್ಬಾಷಾ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಸಲೀಂ ಅಹ್ಮದ್ ಸೋಲಿಗೆ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಶಾಸಕರ ಕುತಂತ್ರವೇ ಕಾರಣ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಬ್ದುಲ್ ನರಸಾಪುರ, ರಾಜು ಮೀರಾನಾಯಕ, ಎಂ.ಎನ್. ಸಾಲಗಾರ, ಮಹ್ಮದ್ರಫೀಕ್ ಬೆಲೇರಿ, ಗೌಸ್ಮೂದ್ದಿನ್ ಹುಯಿಲಗೋಳ, ಶೌಕತ್ ಅಲಿ ಡಾಲಾಯತ, ಇಬ್ರಾಹಿಂ ಹಳ್ಳಿಕೇರಿ, ಅಬೂಬಕರ ಮಕಾಂದಾರ, ಯೂಸೂಫ್ ಮಜ್ಜಗಿ, ಜಾಕೀರ ಇಡ್ಲಿಕಾರ, ಹಾಜಿ ಸಿಂದಗಿ ಚಾಚಾ, ಜಾನಿಸಾಬ ಹಣಗಿ, ಜಾಕೀರ ಕಲಬುರ್ಗಿ, ಜಂದಿಸಾಬ ಮಜ್ಜಗಿ, ಇಮಾಮಹುಸೇನ ಹುಲ್ಲೂರ, ಅಮಜ್ಜದ್ ಕೊಟ್ಟೂರ, ಶಬ್ಬೀರ ರೋಣದ, ಮುನ್ನವರ ಮಕಾಂದಾರ, ಭಕ್ಷಿ ಪಿಂಜಾರ, ಸಮೀರ ಕುನ್ನಿಬಾವಿ, ಸಲೀಂ ಕಾತರಕಿ, ಇಸ್ಮಾಯಿಲ್ ಓದೇಕಾರ, ಅಕಬರಸಾಬ ಡಾಲಾಯತ, ಅಬ್ದುಲ್ ಪಾಚಾಪುರ, ಶರೀಫ ಮದರಿ, ಅಲ್ತಾಫ ಸೈಯ್ಯದ, ಅನ್ವರ ಬಾಗೇವಾಡಿ, ಬಾಷಾ ಮುಳಗುಂದ, ಶಮಶಾದ ನರಗುಂದ, ಬೀಬಿಜಾನ ಬುಕ್ಕಟಗಾರ, ಖಾತುನಬಿ ಮುಲ್ಲಾನವರ, ಮಮ್ತಾಜ ಕರಮುಡಿ, ಖಾದರ ನರಗುಂದ, ಸಂತೋಷ ರೋಟ್ಟಿ, ಮುನ್ನಾಫಸಾಬ ಮಜ್ಜಗಿ, ತೌಸಿಫ ಕಮಾನಗಾರ, ಜೀಲಾನಿ ಗುಳಗುಂದಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

