ಛಾಯಾಗ್ರಾಹಕ ಮೇಲೆ ಹಲ್ಲೆ ಖಂಡನಾರ್ಹ: ಬಳಬಟ್ಟಿ
ಕನ್ನಡಪ್ರಭ ವಾರ್ತೆ, ರೋಣ, ಮೇ 22
ಕೊಪ್ಪಳ ನಗರದ ಜಿಎಂಆರ್ ಕಂಪನಿ ಸಿಬ್ಬಂದಿ ಈಚೆಗೆ ಪತ್ರಿಕಾ ಛಾಯಾಗ್ರಾಹಕ ನಾಭಿರಾಜ ದಸ್ತೇನವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ತೀವ್ರ ಖಂಡನಾರ್ಹವಾಗಿದೆ. ಕೂಡಲೇ ಕಂಪನಿ ಸಿಬ್ಬಂದಿ ಮತ್ತು ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರೋಣ ತಾಲೂಕು ಛಾಯಾಗ್ರಾಹಕ ಸಂಘದ ತಾಲೂಕು ಅಧ್ಯಕ್ಷ ಐ.ಎಂ. ಬಳಬಟ್ಟಿ ಆಗ್ರಹಿಸಿದರು.
ಗುರುವಾರ ರೋಣ ತಾಲೂಕು ಛಾಯಾಗ್ರಾಹಕ ಸಂಘದಿಂದ ತಹಸೀಲ್ದಾರ್ ಎ.ಜಿ. ಪಂಡಿತ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೊಪ್ಪಳದ ಶಿಮ್ಲಾ ಕ್ರಾಸ್ ಬಳಿ ಜಿಎಂಆರ್ ಕಂಪನಿ ವಿರುದ್ಧ ಹಲವು ಸಂಘಟನೆಗಳು, ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಛಾಯಾಚಿತ್ರ ತೆಗೆಯುವ ಸಂದರ್ಭದಲ್ಲಿ 'ಕನ್ನಡಪ್ರಭ' ಪತ್ರಿಕೆ ಛಾಯಾಗ್ರಾಹಕ ನಾಭಿರಾಜ ದಸ್ತೇನವರ ಮೇಲೆ ಜಿಎಂಆರ್ ಕಂಪನಿ ಸಿಬ್ಬಂದಿಗಳು ಏಕಾಏಕಿ ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಕಂಪನಿ ಸಿಬ್ಬಂದಿ ವರ್ತನೆ ಖಂಡನಾರ್ಹವಾಗಿದೆ ಎಂದರು.
ತಾಲೂಕು ಗೌರವಾಧ್ಯಕ್ಷ, ಹಿರಿಯ ಛಾಯಾಗ್ರಾಹಕ ಜಿ.ಎಂ. ಮಂಗಳೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಮಾಧ್ಯಮ ಛಾಯಾಗ್ರಾಹಕರ ಮೇಲೆ ಪದೇ ಪದೇ ನಡೆಯುತ್ತಿರುವ ಹಲ್ಲೆ, ನಿಂನೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಮುಂದಾಗಬೇಕು. ಆ ದಿಸೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾನೂನಿನಲ್ಲಿ ಬದಲಾವಣೆ ತರಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿನ ವಾಸ್ತವಾಂಶಗಳ ಮೇಲೆ ನೈಜ ವರದಿ ಮಾಡುವಲ್ಲಿ ಮಾಧಮದವರಿಗೆ ಮಕ್ತ ವಾತಾವರಣ ಕಲ್ಪಿಸುವಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ತಹಸೀಲ್ದಾರ್ ಎ.ಜಿ. ಪಂಡಿತ ಮಾತನಾಡಿ, ಪತ್ರಿಕಾ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆದಿದ್ದು ವಿಷಾದನೀಯ ಸಂಗತಿಯಾಗಿದೆ.
ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಮಾಧ್ಯಮ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿನ ನಿಮ್ಮ ಮನವಿಯನ್ನು ಕೂಡಲೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಆ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದರು.
ಛಾಯಾಗ್ರಹಕ ಸಂಘದ ತಾಲೂಕು ಸಹ ಕಾರ್ಯದರ್ಶಿ ಪಿ.ಎಸ್. ಪಾಟೀಲ, ಖಜಾಂಚಿ ಈಶ್ವರ ಬೆಟಗೇರಿ, ದೇವೇಂದ್ರಪ್ಪ ಮಡಿವಾಳರ, ಶರಣು ರಡ್ಡೇರ, ಪ್ರಭು ಪಾಟೀಲ, ವಿ.ವಿ. ಉಪಾಧ್ಯ, ಶರಣು ರಡ್ಡೇರ, ಶಿವಾನಂದ ಹಡಪದ, ಶ್ರೀಧರ ರಂಗ್ರೇಜಿ, ಹನುಮಂತ ಮಿಸ್ಕಿನಿ, ಮುಕುಂದ ಕಾಟವಾ, ಚೇತನ ಪಾಟೀಲ, ಶ್ರೀಶೈಲ ಚನ್ನಪ್ಪಗೌಡ್ರ, ವೀರೇಶ ಗಂಟಿಮಠ, ರಾಜು ಶಿರೂರ, ಇಬ್ರಾಹಿಂ ಮುಲ್ಲಾ, ಶಿವು ತಿಪ್ಪಶೆಟ್ಟಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

