ನೈರ್ಮಲ್ಯಕ್ಕೆ ಆದ್ಯತೆ ನೀಡಿ
ರೋಣ: ಸುತ್ತಲಿನ ಪರಿಸರ ಸ್ವಚ್ಛತೆ, ಸುಂದರವಾಗಿ ಇಟ್ಟುಕೊಂಡಲ್ಲಿ ಮನುಷ್ಯ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಆ ದಿಸೆಯಲ್ಲಿ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು ಎಂದು ಹಿರೇಹಾಳ ಗ್ರಾಪಂ ಸದಸ್ಯ ಯಮನೂರಸಾಬ್ ನದಾಫ್ ಹೇಳಿದರು.
ತಾಲೂಕಿನ ಹಿರೇಹಾಳ ಗ್ರಾಮದ ಗ್ರಾಪಂ ಸಭಾ ಭವನದಲ್ಲಿ ಜಿಪಂ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಮಹಾತ್ಮಾ ಗಾಂಧೀಜಿ ರೂರಲ್ ಡವಲಪಮೆಂಟ್ ಮತ್ತು ಯುಥ್ ವೆಲ್ಫೆರ್ ಸೆಂಟರ್ ತುಮಕೂರು ಆಶ್ರಯದಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗಾಗಿ ಸಾಮರ್ಥ್ಯ ವೃದ್ಧಿ ಚಟುವಟಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಾಗಾಲೋಟದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಪರಿಸರಕ್ಕೆ ಧಕ್ಕೆಯಾಗುತ್ತಿದ್ದು, ಜಲ ಮಾಲಿನ್ಯ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯವಾಗುತ್ತಿದೆ. ಇದರಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ದುಷ್ಪರಿಣಾಮವಾಗುತ್ತಿದೆ. ಮನುಷ್ಯನಿಗೆ ಅಗತ್ಯವಾದ ನೀರು, ಗಾಳಿ ಶುದ್ಧವಾಗಿ ಸಿಗುತ್ತಿಲ್ಲ. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಜೀವ ಜಲ ನೀರನ್ನು ಮಿತವ್ಯಯವಾಗಿ ಬಳಸಬೇಕು. ಆ ದಿಸೆಯಲ್ಲಿ ಮಹಾತ್ಮಾ ಗಾಂಧೀಜಿ ರೂರಲ್ ಡವಲಪೇಂಟ್ ಮತ್ತು ಯುಥ್ ವೆಲ್ಫೆರ್ ಸೆಂಟರ್ ತುಮಕೂರು ಸಂಸ್ಥೆಯು ಜನರಲ್ಲಿ ಪರಿಸರ ಕಾಳಜಿ, ನೀರಿನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿರುವ ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ನಂದೀಶ ಬಾಬು, ಈರಣ್ಣ, ರಮೇಶ ಮತ್ತು ಭರತಕುಮಾರ ಪ್ರಾಸ್ತಾವಿಕ ಮಾತನಾಡಿದರು. ಪ್ರೊಜೆಕ್ಟ್ ಮೂಲಕ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಗ್ರಾಪಂ ಸದಸ್ಯ ಚನ್ನವೀರಯ್ಯ ವಸ್ತ್ರದ, ರೇಣವ್ವ ಮಾದರ, ಶಾಂತವ್ವ ಬೇವಿನಗಿಡದ, ಅಂದಪ್ಪ ನೀಡಗುಂದಿ ಅಂಗನವಾಡಿ ಕಾರ್ಯಕರ್ತೆಯರು, ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಭರಮಗೌಡ ಗೌಡರ ನಿರೂಪಿಸಿ, ವಂದಿಸಿದರು.
ಬುದ್ಧ, ಬಸವಣ್ಣ ಮಾನವತಾವಾದಿಗಳು
ಗದಗ: ಬುದ್ಧ ಮತ್ತು ಬಸವಣ್ಣ ಇಬ್ಬರು ಮನುಕುಲಕ್ಕೆ ಸರ್ವ ಸಮಾನತೆಯ ಬೀಜ ಬಿತ್ತಿ ಅತ್ಯುತ್ತಮ ಧರ್ಮದ ಬೆಳೆಯನ್ನು ಬೆಳೆದ ಮಹನೀಯರಾಗಿದ್ದಾರೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶಯ್ಯ ಹೇಳಿದರು. ಅವರು ಸ್ಥಳೀಯ ಶಿವಾನಂದ ನಗರದ ಬಸವ ಮಂಟಪದಲ್ಲಿ ಈಚೆಗೆ ಜರುಗಿದ 107ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಬಸವದಳ ಗದಗ-ಬೆಟಗೇರಿ ಆಶ್ರಯದಲ್ಲಿ ನಡೆದ ಬಸವ ಜಯಂತಿ ಉಪನ್ಯಾಸವನ್ನು ಮಾಲಿಕೆ ಅಡಿಯಲ್ಲಿ ಬುದ್ಧ ಮತ್ತು ಬಸವ ಒಂದು ಚಿಂತನೆ ಕುರಿತು ಉಪನ್ಯಾಸ ನೀಡಿದರು. ಕ್ರಿಪೂ ದಲ್ಲಿ ಬಂದ ಬೌದ್ಧ ಧರ್ಮ, 12ನೇ ಶತಮಾನದಲ್ಲಿ ಬಂದ ಲಿಂಗಾಯತ ಧರ್ಮದ ತತ್ವಗಳು ಸರಳ ಮತ್ತು ಸಹಜವಾಗಿವೆ. ಗೌತಮ ಬುದ್ಧ, ಬಸವಣ್ಣ ಅವರ ತತ್ವಗಳನ್ನು ನಿಷ್ಠೆಯಿಂದ ಪಾಲಿಸಿದ್ದೆಯಾದರೆ ಬದುಕು ಪರಿಶುದ್ಧವಾಗುವುದರಲ್ಲಿ ಸಂದೇಹವಿಲ್ಲ ಎಂದರು. ಎಸ್.ಪಿ. ಹೊಂಬಳ, ಶರೀಫ ಬಿಳೆಯಲಿ, ಎಲ್ಲಪ್ಪ ರಾಮಗಿರಿ, ವಿನಾಯಕ ತಿಮ್ಮಾಪೂರ, ಅನಿಲ ಕಾಳೆ, ಪರಶುರಾಮ ಕಾಳೆ, ಬಸವರಾಜ ಬಿಳೆಯಲಿ, ಎಸ್.ಎನ್. ಹಕಾರಿ, ವಿ.ಎನ್. ಕೆಂಬಾವಿ, ಶಂಕ್ರಣ್ಣ ಅಂಗಡಿ, ನಾಗಭೂಷಣ ಬಡಿಗಣ್ಣನವರ, ರೇಣುಕಾ ಕರಿಗೌಡ್ರ, ಗಂಗಮ್ಮ ಹೂಗಾರ, ನಾಗರತ್ನ ಅಸುಂಡಿ, ಈರಮ್ಮ ಮಾನ್ವಿ ಭಾಗವಹಿಸಿದ್ದರು. ವಿ.ಕೆ. ಕರಿಗೌಡ್ರ ಸ್ವಾಗತಿಸಿದರು. ಕಿರಣ ತಿಪ್ಪನವರ ನಿರ್ವಹಿಸಿದರು. ಗೌರಕ್ಕ ಬಡಿಗಣ್ಣನವರ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

