ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ
ರೋಣ: ಸ್ಥಳೀಯ ಪುರಸಭೆಯಲ್ಲಿ 33 ಪೌರ ಕಾರ್ಮಿಕರಿದ್ದು, ಇವರಲ್ಲಿ 4 ಪೌರ ಕಾರ್ಮಿಕರಿಗೆ, 10 ದಿನಗೂಲಿ ಕಾರ್ಮಿಕರಿಗೆ ವೇತನ ವಿತರಣೆಯಲ್ಲಿ ಅನ್ಯಾಯವಾಗಿದೆ. ಕೂಡಲೇ ತಾರತಮ್ಯತೆ ನಿವಾರಣೆ ಮತ್ತು ಪೌರ ಕಾರ್ಮಿಕರು ಶನಿವಾರ ಸಂಜೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಪಿ.ಎಂ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ ಅವರು ಮಾರ್ಚ್ ತಿಂಗಳಲ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸದೇ ಮತ್ತು ಪುರಸಭೆ ಅಧ್ಯಕ್ಷರ, ಸದಸ್ಯರ ಗಮನಕ್ಕೆ ತರದೇ ಏಕಪಕ್ಷೀಯವಾಗಿ 33 ಪೌರ ಕಾರ್ಮಿಕರಲ್ಲಿ 10 ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡಿದ್ದಾರೆ. ಇನ್ನೂ 9 ದಲಿತರಿದ್ದು, ನಮ್ಮನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿದ್ದಾರೆ. ಕೂಡಲೇ 9 ಕಾರ್ಮಿಕರಿಗೆ ಹೆಚ್ಚಳ ಮಾಡಿದಂತೆ ನಮಗೂ ವೇತನ ಹೆಚ್ಚಳ ಮಾಡಬೇಕು. ಇಲ್ಲದಿದ್ದಲ್ಲಿ ಅವರ ವೇತನವನ್ನು ಕಡಿತಗೊಳಿಸಬೇಕು. ನಾವು ಅವರಂತೆ ಸಮಾನವಾಗಿ ದುಡಿಯುತ್ತಿದ್ದೇವೆ.
ನಮಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ದಿನಗೂಲಿ ಕಾರ್ಮಿಕ ಅಶೋಕ ದೊಡ್ಡಮನಿ, ಹನಮಂತಪ್ಪ ಮುದೇನಗುಡಿ, ಮಹದೇವಪ್ಪ ತೆಗ್ಗಿನಮನಿ ಒತ್ತಾಯಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪ್ರಕಾಶ ಹೊಸಳ್ಳಿ, ಸಂಘಟನಾ ಸಂಚಾಲಕ, ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಅವರು ಪೌರ ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿ ಮಾತನಾಡಿದರು.
ಕದರವೇ ತಾಲೂಕ ಸಂಚಾಲಕ ಪ್ರಕಾಶ ಹೊಸಳ್ಳಿ, ಮಂಜುನಾಥ ಹಾಳಕೇರಿ, ಪೌರ ಕಾರ್ಮಿಕರಾದ ಹನುಮಂತಪ್ಪ ಮುದೇನಗುಡಿ, ಪ್ರಕಾಶ ಯಡಿಯಾಪೂರ, ಮಹಾದೇವಪ್ಪ ತೆಗ್ಗಿನಮನಿ, ಅಶೋಕ ದೊಡ್ಡಮನಿ, ಬಸವರಾಜ ತೊಂಡಿಹಾಳ, ರುದ್ರಪ್ಪ ತೆಗ್ಗಿನಮನಿ, ದ್ಯಾಮಣ್ಣ ಕೊಪ್ಪದ, ಶಿದ್ದವ್ವ ದೊಡ್ಡಮನಿ, ಎಂ.ಎ. ಕಿರೇಸೂರ, ಎಂ.ಎ. ಮುಲ್ಲಾ, ನಾಗಪ್ಪ ಜಿಡ್ಡಿಬಾಗೀಲ, ಜಿ.ಐ. ಇಟಗಿ ಇದ್ದರು.
ಜೂ 2ರಿಂದ ಸತ್ಯಾಗ್ರಹ: ಪುರಸಭೆಯ ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ ಮತ್ತು ತಾರತಮ್ಯತೆಯನ್ನು ನಿವಾರಣೆ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮೇ 31ರೊಳಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಜೂನ್ 2ರಿಂದ ಪುರಸಭೆ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟ ಕಾಲ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಪೌರ ಕಾರ್ಮಿಕರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

