ಗದಗ

ರಾಮಗೇರಿ ಗ್ರಾಪಂಗೆ ನಿಲೇಶ ಕಾಳೆ ಆಯ್ಕೆ

Published On :

ಲಕ್ಷ್ಮೇಶ್ವರ: ಸಮೀಪದ ರಾಮಗೇರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನಿಲೇಶ ಕಾಳೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಾಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ನಾರಾಯಣ ತಿಳಿಸಿದ್ದಾರೆ. ರಾಮಗೇರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಿಂಗನಗೌಡ ಪಾಟೀಲ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು, ಒಟ್ಟು 13 ಜನ ಗ್ರಾಪಂ ಸದಸ್ಯರು ಮತದಾನ ಮಾಡಿದ್ದು, ನಿಲೇಶಪ್ಪ ಹೆಗ್ಗಪ್ಪ ಕಾಳೆ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಶೇಖಪ್ಪ ಕಾಳೆ 5 ಮತಗಳನ್ನು ಪಡೆದರು ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ, ನಿಂಗನಗೌಡ ಪಾಟೀಲ, ಬಸಣ್ಣ ಬೆಟಗೇರಿ, ಮಲ್ಲಣ್ಣ ಯುಗಾಡಿ, ಚೆಂದ್ರು ತಳವಾರ, ನಾಗರಾಜ ಮಡಿವಾಳರ, ದಿವಾಕರ ಬಡಿಗೇರ, ಮಲ್ಲೇಶ ಬಂಡಿವಡ್ಡರ, ಭರಮಗೌಡ ಹೊಸಗೌಡ್ರ, ಮಾರುತಿ ತಳವಾರ, ಬಸವರಾಜ ಅಂಗಡಿ, ಬಸಪ್ಪ ಕುರಟ್ಟಿ, ಹನಮಂತಪ್ಪ ಹಿತ್ತಲಮನಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.