ಕುಸ್ತಿ: ಸಾಳುಂಕೆ ಹ್ಯಾಟ್ರಿಕ್ ಸಾಧನೆ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.4
ಪಟ್ಟಣದ ಲಿಂಗೈಕ್ಯ ಸದ್ಗುರು ಹಾರಕೂಡ ಚಿಂಚೋಳಿ ಚೆನ್ನಬಸವ ಶಿವಯೋಗಿಗಳವರ 62ನೇ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಮುಲ್ಲಾಮಾರಿ ನದಿ ದಂಡೆಯ ಪಂಚಲಿಂಗೇಶ್ವರ ತೇರ ಮೈದಾನದಲ್ಲಿ ಏರ್ಪಡಿಸಿದ ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಆಳಂದ ತಾಲೂಕಿನ ಅರುಣ ಸಾಳುಂಕೆ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಪಟ್ಟಣದ ಮುಲ್ಲಾಮಾರಿ ನದಿಯ ತೇರ ಮೈದಾನದಲ್ಲಿ ಈಚೆಗೆ ನಡೆದ ಕುಸ್ತಿಯಲ್ಲಿ ಆಳಂದ ತಾಲೂಕಿನ ಅರುಣ ಸಾಳುಂಕೆ, ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಮುದಗಢ ಬಾಲಾಜಿ ಪೆದ್ದಿ ಜಂಗಿ ಕುಸ್ತಿ ನಡೆಯಿತು.
ಅಂತಿಮ ಪಂದ್ಯದಲ್ಲಿ ಅರುಣ ಸಾಳುಂಕೆ ಅವರು ಬಾಲಾಜಿ ಅವರನ್ನು ಸೋಲಿಸುವ ಮೂಲಕ ಕುಸ್ತಿ ಪಂದ್ಯದಲ್ಲಿ ಕಳೆದ 3 ವರ್ಷಗಳಿಂದ ಪ್ರಥಮ ಬಹುಮಾನ ಪಡೆದುಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದರು.
ಹಾರಕೂಡ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಪೈಲ್ವಾನರಿಗೆ 5 ತೊಲೆ ಬೆಳ್ಳಿ ಖಡ್ಗ ಮತ್ತು 2 ಸಾವಿರ ನೀಡಿ ಸತ್ಕರಿಸಿದರು.
ಒಟ್ಟು 68 ಕುಸ್ತಿ ಪಂದ್ಯಗಳು ಜರುಗಿದವು. ಮಹಾರಾಷ್ಟ್ರ, ಹೈದ್ರಾಬಾದ್, ಸೊಲ್ಲಾಪುರ, ಉಮರ್ಗಾ, ಗುಲ್ಬರ್ಗ, ಹುಮನಾಬಾದ್, ಸೇಡಂ, ಬೀದರ್, ಸೇಡಂ, ಬಿಜಾಪುರ ಮುಂತಾದ ನಗರ ಪ್ರದೇಶಗಳಿಂದ ಕುಸ್ತಿ ಪೈಲ್ವಾನರು ಆಗಮಿಸಿದರು.
ಹಿರಿಯ ಕುಸ್ತಿ ಪಟುಗಳಾದ ಜಗನ್ನಾಥ ಕಟ್ಟಿ, ಮೊಗಲಪ್ಪ ಕರಕಟ್ಟಿ, ಶಂಕರ ಅಲ್ಲಾಪುರ ಕುಸ್ತಿ ಪಂದ್ಯಾವಳಿಗಳನ್ನು ನಡೆಸಿಕೊಟ್ಟರು. ಕುಸ್ತಿ ಪಂದ್ಯ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

