ಗುಲ್ಬರ್ಗಾ

ಮಾನವೀಯತೆಗೆ ಮಿಗಿಲಾದ ಕಾನೂನು ಇಲ್ಲ

Published On :

ಕನ್ನಡಪ್ರಭ ವಾರ್ತೆ, ಸುರಪುರ, ಏ.5
ಪ್ರತಿಯೊಬ್ಬರು ನ್ಯಾಯದ ಹಾದಿಯ ಮೇಲೆ ನಡೆದು ತಮ್ಮ ಪಾಲಿನ ಕೆಲಸದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಲ್ಲಿ ನಮಗೆ ಯಾವುದೇ ಕಾನೂನು ಬೇಕಾಗಿಲ್ಲ. ಮಾನವೀಯ ಮೌಲ್ಯದ ನಡೆ ನುಡಿಗಿಂತ ಮಿಗಿಲಾದ ಕಾನೂನು ಇಲ್ಲ ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಹೇಳಿದರು.
ಸಮೀಪದ ರಂಗಂಪೇಟೆಯ ಜೀವೇಶ್ವರ ಮಂದಿರದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ಜಾಥಾದ ಅಂಗವಾಗಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಣ ವ್ಯರ್ಥ: ಕಾನೂನಿನ ಸಾಮಾನ್ಯ ತಿಳಿವಳಿಕೆ ಕೊರತೆಯಿಂದ ಕೆಲವರು ಇಲ್ಲದ ಅವಘಡಗಳಿಗೆ ಸಿಲುಕಿದರೆ ಇನ್ನೂ ಕೆಲವರು ಸಣ್ಣಪುಟ್ಟ ವಿಷಯಗಳಿಗಾಗಿ ವೃಥಾ ನ್ಯಾಯಾಲಯಗಳಿಗೆ ಅಲೆದಾಡುತ್ತಾರೆ. ಇದರಿಂದ ಸಮಯ ಮತ್ತು ಹಣ ವ್ಯರ್ಥ ಹಾಳಾಗುತ್ತಿದೆ. ಜೊತೆಗೆ ಮಾನಸಿಕ ನೆಮ್ಮದಿ ಕಳೆದುಕೊಂಡು ಇಲ್ಲದ ಅಪರಾಧಗಳಿಗೆ ಸಿಲುಕುತ್ತಿದ್ದಾರೆ. ಕಾರಣ ಇದನ್ನು ತಪ್ಪಿಸಿ ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಮಾಡಬೇಕು ಎಂಬುದೇ ಸಾಕ್ಷರಥಾ ಜಾಥಾದ ಉದ್ದೇಶವಾಗಿದೆ ಎಂದು ವಿವರಿಸಿದರು.
ಪ್ರತಿಯೊಬ್ಬರಿಗೂ ಕಾನೂನಿನ ಸಾಮಾನ್ಯಜ್ಞಾನ ನೀಡಬೇಕೆಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರವು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಬಡವರಿಗಾಗಿ ಉಚಿತ ಕಾನೂನು- ನೆರವು ನೀಡಲಾಗುತ್ತಿದೆ. ಹಕ್ಕುಗಳಿಂದ, ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ನಾಗರಿಕರು ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಕಾರಣ ನಾಗರಿಕರು ಇದರ ಲಾಭ ಪಡೆಯಬೇಕೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಪಾಟೀಲ, ನಿಂಗಣ್ಣ ಚಿಂಚೋಡಿ, ಎಸ್.ಸಿದ್ರಾಮಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಚುಟುಕು ಸಾಹಿತಿ ನಾಗಪ್ಪ ತ್ರಿವೇದಿ ಮಾತನಾಡಿದರು. ವಕೀಲರಾದ ಜಿ.ಎಸ್. ಪಾಟೀಲ, ದೇವಿಂದ್ರಪ್ಪ ಬೇವಿನಕಟ್ಟಿ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ ಪಾಡಮುಖಿ ವೇದಿಕೆಯಲ್ಲಿದ್ದರು.
ಉಪನ್ಯಾಸ: ಗ್ರಾಹಕರ ಕಾಯ್ದೆ ಕುರಿತು ನಂದನಗೌಡ ಪಾಟೀಲ, ಕಲಬೆರಕೆ ಮಹಿಳೆಗೆ ಆಸ್ತಿ ಹಕ್ಕು ಕುರಿತು ಗೋಪಾಲ ತವಾರ ಉಪನ್ಯಾಸ ನೀಡಿದರು. ವೆಂಕಾರಡ್ಡಿ ಹವಾಲ್ದಾರ್ ಪ್ರಾಸ್ತಾವಿಕ ಮಾತನಾಡಿದರು. ಜ್ಞಾನದೇವ ಪಾಣಿಬಾತೆ ಸ್ವಾಗತಿಸಿದರು. ಜಿ.ಆರ್. ಬನ್ನಾಳೆ ನಿರೂಪಿಸಿದರು. ಮನೋಹರ ಕುಂಟೋಜಿ ವಂದಿಸಿದರು. ರಮಾನಂದ ಕವಲಿ, ಚನ್ನಮಲ್ಲಪ್ಪ ಸಾಲಿಮನಿ, ಬಲಭೀಮ ನಾಯಕ, ಸಂಗಣ್ಣ ಗುಳಗಿ ಮಲ್ಲಿಕಾರ್ಜುನ ಮಂಗಿಹಾಳ, ವಿಶ್ವಾಮಿತ್ರ ಕಟ್ಟಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.