ನಿಂಗದಳ್ಳಿ ಗ್ರಾಮದಲ್ಲಿ ಬಸವ ಪುರಾಣ ಆರಂಭ
ಕನ್ನಡಪ್ರಭ ವಾರ್ತೆ, ಆಳಂದ, ಏ. 8
ತಾಲೂಕಿನ ಗಡಿಗ್ರಾಮವಾದ ನಿಂಗದಳ್ಳಿ ಗ್ರಾಮದ ಐತಿಹಾಸಿಕ ಬಸವೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಬಸವ ಪುರಾಣ, ಶ್ರೀಶೈಲ ಮತ್ತು ಕಾಶೀ ಜಗದ್ಗುರುಗಳ ಅಡ್ಡ ಪಲ್ಲಕ್ಕಿ-ಲಕ್ಷ ದೀಪೋತ್ಸವ ಸೇರಿದಂತೆ ಬೃಹತ್ ಪ್ರಮಾಣದ ಧಾರ್ಮಿಕ ಸಮಾರಂಭಕ್ಕೆ ಗ್ರಾಮದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಭಾನುವಾರ ಹುಬ್ಬಳಿಯ ನವನಗರ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ದೇವಾಲಯದ ಕಮೀಟಿ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭ ಆಗಮಿಸುವ ಸಾವಿರಾರು ಭಕ್ತರಿಗೆ ಕುಡಿಯುವ ನೀರು ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಶಿಖರಕ್ಕೆ ಸುಮಾರು ರು. 5 ಲಕ್ಷ ವೆಚ್ಚದಲ್ಲಿ ಕಳಸ ಏರಿಸಲಾಗುವುದು. ನಿಂಗದಳ್ಳಿಯ ತವರು ಮನೆಯ ಮುತ್ತೈದೆಯರಿಗೆ ಸನ್ಮಾನ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾರಂಭ ಜರುಗಲಿದೆ ಎಂದರು.
ಕಳಸಾರೋಹಣ: ಮಾ. 31ರಿಂದ ಬಸವ ಪುರಾಣ ಆರಂಭಗೊಂಡಿದ್ದು, ಮೇ 15ಕ್ಕೆ ಮಹಾಮಂಗಲಗೊಳ್ಳುವುದು. ಮೇ 4ರಂದು ಬೆಳಗಿನ ಜಾವ ರುದ್ರಾಭಿಷೇಕ, 8ಕ್ಕೆ ಶಿಖರದ ಕಳಸಾರೋಹಣ, ರಾತ್ರಿ 9ಕ್ಕೆ ರಥೋತ್ಸವ ಜರುಗಲಿದೆ. ಮೇ. 14 ರಂದು ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದ ಮೆರವಣಿಗೆ ಕುಂಭಕಳಸದೊಂದಿಗೆ ನಡೆಯಲಿದೆ.
ಲಕ್ಷ ದೀಪೋತ್ಸವ: ಮೇ 15 ರಂದು ಬೆಳಗಿನ 9ಕ್ಕೆ ಧರ್ಮ ಸಭೆ, ಬಸವ ಪುರಾಣ ಮಹಾಮಂಗಲ, ಗುರು ರಕ್ಷೆ ಹಾಗೂ ರಾತ್ರಿ 7ಕ್ಕೆ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಪುರಾಣವನ್ನು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿಕೊಡುತ್ತಿದ್ದು, ಸಂಗೀತವನ್ನು ಆಕಾಶವಾಣಿ ಕಲಾವಿದ ಶಿವಶರಣಯ್ಯ ಸ್ವಾಮಿ ಮತ್ತು ತಬಲಾ ಸಾಥಿ ಷಣ್ಮೂಖಯ್ಯ ಸ್ವಾಮಿ ನಿಂಬಾಳ ಅವರು ನಡೆಸಿಕೊಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

