11ಕ್ಕೆ ಚೈತ್ರೋತ್ಸವ- 2013
ಗುಲ್ಬರ್ಗ: ಸಂಗೀತ- ನೃತ್ಯ- ಯೋಗ ಹಾಗೂ ಕರಾಟೆ ಪ್ರದರ್ಶನದ ಚೈತ್ರೋತ್ಸವ- 2013 ಕಾರ್ಯಕ್ರಮವನ್ನು ನಗರದ ರೋಟರಿ ಕ್ಲಬ್ನ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಏ.11ರಂದು ಬೆ. 10.30ಕ್ಕೆ ಆಯೋಜಿಸಲಾಗಿದೆ.
ನಗರದ ಚಿತ್ತಾರಿ ಫೌಂಡೇಶನ್ ಅಧ್ಯಕ್ಷ ವಿ.ಎನ್. ಚಿತ್ತಾರಿಯವರು ಮುಖ್ಯ ಅತಿಥಿ, ಅಧ್ಯಕ್ಷತೆಯನ್ನು ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ವಹಿಸುವರು.
ಚಿಗುರು ಚಿನ್ಮಯ ಪ್ರಶಸ್ತಿ: ಭರತನಾಟ್ಯ ಕಲಾವಿದೆ ಚಿನ್ಮಯಿ ವೀಣಾ ಚಂದ್ರಕಾಂತ, ಕೊಳಲುವಾದಕ ಮಣಿಕಂಠ ವಿ. ಕುಲಕರ್ಣಿ, ಬಹು ಪ್ರತಿಭಾ ಸಂಪನ್ನ ಗುರುರಾಜ ಪಾಟೀಲ್, ಕರಾಟೆ ಪರಿಣಿತ ಸಾಯಿನಾಥರೆಡ್ಡಿ ಪಾಟೀಲ್ ಹಾಗೂ ಯೋಗಾಸನ ಪಟು ಅನೂಷಾ ಭಟ್ ಅವರಿಗೆ 2013ನೇ ಸಾಲಿನ ಡಾ. ಪಿ.ಎಸ್. ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಪ್ರಶಸ್ತಿಯು ತಲಾ 1001 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಫಲ-ಪುಷ್ಪ ತಾಂಬೂಲ ಒಳಗೊಂಡಿರುತ್ತದೆ.
ಕಳೆದ 13 ವರ್ಷಗಳಲ್ಲಿ, ಈವರೆಗೆ, 16 ವರ್ಷದೊಳಗಿನ 55ಕ್ಕೂ ಹೆಚ್ಚು ಬಾಲ ಕಲಾವಿದರಿಗೆ ಡಾ. ಪಿ.ಎಸ್. ಶಂಕರ ಚಿಗುರು ಚಿನ್ಮಯ ಪ್ರಶಸ್ತಿನೀಡಿ, ಪುರಸ್ಕರಿಸಲಾಗಿದೆ. ಇದೇ ವೇಳೆ ಗುವಿವಿ 'ಗೌಡಾ'ಗೆ ಭಾಜನರಾಗಿರುವ ಡಾ. ಶ್ರೀನಿವಾಸ ಸಿರನೂರಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಾಬುರಾವ ಯಡ್ರಾಮಿ, ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ 2012ನೇ ಸಾಲಿಗೆ ಅತ್ಯುತ್ತಮ ಪ್ರಕಾಶಕರ ಪ್ರಶಸ್ತಿಗೆ ಭಾಜನರಾಗಿರುವ ಬಸವರಾಜ ಕೊನೇಕ್ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

