ಗುಲ್ಬರ್ಗ ಬಿಸಿಲಿಗೆ ಶೃತಿ ತಪ್ಪಿದ ಚಿತ್ರನಟಿ
ಕ.ಪ್ರಭ. ವಾರ್ತೆ ಗುಲ್ಬರ್ಗ ಏ.10
ಕೆಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಬುಧವಾರ ಗುಲ್ಬರ್ಗಕ್ಕೆ ಭೇಟಿ ನೀಡಿದ್ದ ಚಿತ್ರನಟಿ ಶೃತಿ ಇಲ್ಲಿನ ಉರಿ ಬಿಸಿಲಿಗೆ ಪರೇಶಾನ್ ಆದರು. ಇಲ್ಲಿನ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶೃತಿ ಅವರ ಕಾರ್ಯಕ್ರಮವಿತ್ತು. ಅಲ್ಲಿಗೆ ವಾಹನದಲ್ಲಿ ಬಂದವರೇ ಇಳಿದು ಕಲ್ಯಾಣ ಮಂಟಪ ಪ್ರವೇಶವಾಗಿನ ಬಿಸಿಲ ಧಗೆಗೆ ಬೆಚ್ಚಿದ್ದರು.
ತಲೆ ಮೇಲೆ ಸೀರೆ ಸೆರಗನ್ನು ಹೊದ್ದುಕೊಂಡ ಶೃತಿ, ತಾವು ಕಾರ್ಯಕ್ರಮ ಮುಗಿಸಿ ಮತದಾರರನ್ನು ಮಾತನಾಡಿಸಿದ ಎಲ್ಲ ಸಂದರ್ಭಗಳಲ್ಲಿಯೂ ಸೆರಗನ್ನು ಮಾತ್ರ ತಲೆಯ ಮೇಲಿನಿಂದ ತೆಗೆದಿರಲಿಲ್ಲ. ಬಾಯಾರಿಕೆ ಎಂದು ಸಮಾರಂಭದಲ್ಲಿ ಹೆಚ್ಚು ನೀರು ಕುಡಿದರು. ಕೆಜೆಪಿ ಗುಲ್ಬರ್ಗ(ದ) ಅಭ್ಯರ್ಥಿ ಎಸ್.ಕೆ. ಕಾಂತಾ, ಬಸವರಾಜ ಇಂಗಿನ್ ಸೇರಿದಂತೆ ಅನೇಕ ನಾಯಕರು ಶೃತಿಯವರೊಂದಿಗೆ ಇದ್ದು ಪ್ರಚಾರ ಸಭೆಗಳನ್ನು ನಡೆಸಿಕೊಟ್ಟರು. ಮಂಗಳವಾರ, ಬುಧವಾರದ ದಿನಗಳಂತೂ ಗುಲ್ಬರ್ಗದಲ್ಲಿ ರಾಜ್ಯದಲ್ಲೇ ಹೆಚ್ಚಿನ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ತಾಪದ ದಿನಗಳಲ್ಲೇ ಶೃತಿ ಗುಲ್ಬರ್ಗಕ್ಕೆ ಬಂದಿದ್ದರಿಂದ ಹೆಚ್ಚಿನ ಬಿಸಿ ಅನುಭವಿಸುವಂತಾಯ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

