ಗುಲ್ಬರ್ಗಾ

9 ನಾಮಪತ್ರ ಸಲ್ಲಿಕೆ

Published On :

ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ.5ರಂದು ನಡೆಯುವ ಚುನಾವಣೆಗಾಗಿ ಏ.13ರಂದು ಒಟ್ಟು 9 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಈವರೆಗೆ ಒಟ್ಟು 12 ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಶನಿವಾರ ಅಫಜಲ್ಪುರ, ಚಿತ್ತಾಪುರ(ಎಸ್‌ಸಿ), ಗುಲ್ಬರ್ಗ(ಉತ್ತರ), ಚಿಂಚೋಳಿ(ಎಸ್‌ಸಿ) ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರಗಳ ಸ್ವೀಕೃತವಾಗಿಲ್ಲ. ಉಳಿದ ಜೇವರ್ಗಿ, ಸೇಡಂ, ಗುಲ್ಬರ್ಗ ಗ್ರಾಮೀಣ(ಎಸ್‌ಸಿ) ಮೀಸಲು ಮತ್ತು ಗುಲ್ಬರ್ಗ ದಕ್ಷಿಣ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಮತ್ತು ಪಕ್ಷದ ಹೆಸರು ಇಂತಿದೆ.
ಜೇವರ್ಗಿ- ಕೌಸರ್ ಬೇಗಂ- ಪಕ್ಷೇತರ, ಸೈಯ್ಯದ್ ಪಟೇಲ್ - ಪಕ್ಷೇತರ, ವಕೀಲ್ ಪಟೇಲ್ ಸೇಡಂ- ಮಹ್ಮದ್ ಅಲಿ - ಪಕ್ಷೇತರ, ಮೋನಪ್ಪ - ಪಕ್ಷೇತರ. ಗುಲ್ಬರ್ಗ ಗ್ರಾಮೀಣ(ಎಸ್‌ಸಿ ಮೀಸಲು)- ರೇವಣಸಿದ್ದಪ್ಪ ತಂದೆ ಬಸಣ್ಣ ದೊಡ್ಮನಿ- ಪಕ್ಷೇತರ, ನಿಂಗಣ್ಣ ಸಾಯಬಣ್ಣ- ಎಸ್‌ಯುಸಿಐ(ಸಿ). ಗುಲ್ಬರ್ಗ ದಕ್ಷಿಣ- ನಾಗಮ್ಮ ಗಂಡ ಎಚ್.ವಿ. ದಿವಾಕರ್- ಪಕ್ಷೇತರ, ಸಂದೀಪ ಪಾಟೀಲ್ ತಂದೆ ಶಿವಪುತ್ರಪ್ಪ- ಪಕ್ಷೇತರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.