ಗುಲ್ಬರ್ಗಾ

'ಸರ್ಕಾರದ ಸಾಧನೆ ಗೆಲವಿನ ಶ್ರೀರಕ್ಷೆ'

Published On :

ಅಫಜಲ್ಪುರ: ರಾಜ್ಯ ಬಿಜೆಪಿ ಸರ್ಕಾರ ಮಾಡಿರುವ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಸಾಧನೆಗಳೇ ತಮಗೆ ಗೆಲವಿನ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ದಿಲೀಪ ಪಾಟೀಲ್ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಕ್ಷದ ಚುನಾವಣಾ ಕಚೇರಿ ಉದ್ಘಾಟಿಸಿ ಮತನಾಡಿ, ಪಕ್ಷದ ಮುಖಂಡರು ತಮ್ಮ ಸೇವೆ ಪರಿಗಣಿಸಿ ಟಿಕೆಟ್ ನೀಡಿದ್ದಾರೆ. ಮತದಾರರು ಆಶೀರ್ವದಿಸಿ ತಮಗೆ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ನಂತರ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡು ತಾಲೂಕಿನ ಮಣ್ಣೂರ, ಶೇಷಗಿರಿ, ಹೊಸೂರ, ಉಪ್ಪಾರವಾಡಿ, ಶಿವಬಾಳನಗರ, ರಾಮನಗರ, ಶಿವೂರ, ಕುಡಿಗನೂರ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಪಕ್ಷದ ತಾಲೂಕಾಧ್ಯಕ್ಷ ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪೂಜಾರಿ, ರಮೇಶ ನೀಲಗಾರ, ಡಾ. ಸಿ.ವಿ. ಟಕ್ಕಳಕಿ, ಧರ್ಮಣ್ಣ ಇಟಗಾ, ಪಪಂ ಸದಸ್ಯ ವಿನೋದ ರಾಠೋಡ, ಸಂಜೀವ ನನ್ನಾಜಿ, ಬೀರಣ್ಣ ಕನಕ ಟೇಲರ್, ಚಂದಮ್ಮ ಪಾಟೀಲ್, ಶೈಲೇಶ ಗುಣಾರಿ, ಮಲ್ಲಪ್ಪ ಪೂಜಾರಿ, ಮಣ್ಣೂರ ಗ್ರಾಪಂ ಸದಸ್ಯರಾದ ರೇವಣಸಿದ್ದಪ್ಪ ಪೂಜಾರಿ, ಖಾಜಪ್ಪ ಹಿರೇಕುರುಬರ ಇತರರು ಇದ್ದರು.
'ಬಿಜೆಪಿಗೆ ತಕ್ಕಪಾಠ'
ಅಫಜಲ್ಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲದ ಬಿಜೆಪಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಹೇಳಿದರು. ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಎಂ.ವೈ. ಪಾಟೀಲರ ಪರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರನ್ನು ಕಳೆದುಕೊಂಡ ಬಿಜೆಪಿ ಕತ್ತಲಲ್ಲಿದ್ದು, ಗೆಲ್ಲಬಲ್ಲ ನಾಯಕರಿಲ್ಲದೆ ನರಳುತ್ತಿದೆ ಎಂದರು. ಕೆಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, 25 ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕ ಮಾಲೀಕಯ್ಯ ಗುತ್ತೇದಾರ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದರಿಂದ ಅಫಜಲ್ಪುರ ಕ್ಷೇತ್ರ ಹಿಂದುಳಿಯಲು ಕಾರಣ ಎಂದು ಆರೋಪಿಸಿದರು. ಪಕ್ಷದ ಯುವ ಘಟಕದ ಅಧ್ಯಕ್ಷ ಜಗದೀಶ ಹಿರೇಮನಿ, ಜಿಪಂ ಸದಸ್ಯರಾದ ಪ್ರಕಾರ ಜಮಾದಾರ, ಮತೀನ ಪಟೇಲ್, ಸಿದ್ದಾರ್ಥ ಬಸರಿಗಿಡ, ಮುಖಂಡರಾದ ತುಕಾರಾಮ, ತುಕಾರಾಮಗೌಡ  ಪಾಟೀಲ್,  ರವಿಶೆಟ್ಟಿ, ಡಾ. ಸಂಜು ಪಾಟೀಲ್, ಪ್ರೇಮ ಅಂಬೂರೆ, ರವಿ ನಂದಶೆಟ್ಟಿ, ರಾಜು ಪಾಟೀಲ್, ದತ್ತು ಬಂಡಗಾರ, ಪಪಂ ಸದಸ್ಯರು,  ತಾಪಂ ಸದಸ್ಯರು ಇದ್ದರು.
ಹೇಳಿಕೆಗೆ ಸ್ವಾಗತ
ಗುಲ್ಬರ್ಗ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಗೊಬ್ಬ ಮಹಿಳೆಯರಿಗೆ ಆದ್ಯತೆ ನೀಡುವುದಾಗಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹೇಳಿರುವುದು ಸ್ವಾಗತಾರ್ಹ ಎಂದು ವಿಶ್ವೇಶ್ವರಯ್ಯ ಕೋ- ಆಪರೇಟಿವ್ ಬ್ಯಾಂಕಿನ ನಿರ್ದೇಶಕಿ, ಸಮಾಜ ಸೇವಕಿ ಸ್ಮಿತಾ ಕವಳೆ ಹೇಳಿದ್ದಾರೆ. ಜಿಲ್ಲೆಯ ಯಾವುದೇ ಮೀಸಲು ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ.
ಕೆಜೆಪಿಗೆ ಪೂಜಾರಿ
ಗುಲ್ಬರ್ಗ: ಕೆಜೆಪಿ ಹಿಂದುಳಿದ ಘಟಕದ ಗುಲ್ಬರ್ಗ ಜಿಲ್ಲಾಧ್ಯಕ್ಷರನ್ನಾಗಿ ವಿಠ್ಠಲ್ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹಿಂದಳಿದ ಘಟಕದ ರಾಜ್ಯಾಧ್ಯಕ್ಷ ಮುಕುಡಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.