35 ಅಭ್ಯರ್ಥಿಗಳಿಂದ 42 ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.16
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೆ.5 ರಂದು ನಡೆಯುವ ಚುನಾವಣೆಗಾಗಿ ಮಂಗಳವಾರ 35 ಅಭ್ಯರ್ಥಿಗಳು ಒಟ್ಟು 42 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ ಹೋರಾಟದ ಹಳೆ ಹುಲಿ, ಮಾಜಿ ಸಚಿವ ವೈಜನಾಥ ಪಾಟೀಲ್ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿ ಸೇಡಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಈವರೆಗೆ ಒಟ್ಟು 96 ಅಭ್ಯರ್ಥಿಗಳಿಂದ 140 ನಾಮಪತ್ರಗಳನ್ನು ಸ್ವೀಕರಿಸಿದಂತಾಗಿದೆ. ಇದರಲ್ಲಿ ನಾಗಮ್ಮ ಎಚ್.ವಿ. ದಿವಾಕರ್ ಸೋಮವಾರದಂದು ಮತ್ತು ನಿಂಗಣ್ಣ ತಂದೆ ಸಾಯಬಣ್ಣ, ಮಲಕಾಜಪ್ಪ ತಂದೆ ಯಶ್ವಂತರಾವ, ಹುಸೇನ್ ಪಟೇಲ್ ತಂದೆ ರೆಹಮಾನ ಪಟೇಲ್, ರಮೇಶ ಯಾಕಾಪುರ ತಂದೆ ಶರಣಪ್ಪ ಯಾಕಾಪುರ, ನಾಸೀರ್ ಹುಸೇನ್ ತಂದೆ ಸಾದತ್ ಹುಸೇನ್ ಅವರು ಮಂಗಳವಾರದಂದು ಪುನಃ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ವಿಧಾನಸಭಾ ಕ್ಷೇತ್ರವಾರು ನಾಮಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಹೆಸರು
ಅಫಜಲ್ಪುರ: ಬಾಷಾ ಪಟೇಲ್ ತಂದೆ ನಬೀಸಾಬ್ ಪಟೇಲ್- ಬಿಎಸ್ಆರ್(ಕಾಂಗ್ರೆಸ್), ಮಲಕಾಜಪ್ಪ ತಂದೆ ಯಶ್ವಂತರಾವ- ಕೆಜೆಪಿ.
ಜೇವರ್ಗಿ: ಹುಸೇನ್ ಪಟೇಲ್ ತಂದೆ ರೆಹಮಾನ ಪಟೇಲ್- ಬಿಎಸ್ಪಿ, ಮಹ್ಮದ್ ಯೂನೂಸ್ ಒಂಟಿ ತಂದೆ ಮೆಹಬೂಬ್ ಅಲಿ ಒಂಟಿ- ಪಕ್ಷೇತರ, ರಾಮು ತಂದೆ ಛತ್ರು- ಪಕ್ಷೇತರ, ಅಯ್ಯಪ್ಪ ತಂದೆ ಬಸವರಾಜ-ಬಿಜೆಪಿ ಮತ್ತು ಪಕ್ಷೇತರ.
ಚಿತ್ತಾಪುರ(ಎಸ್ಸಿ): ರವಿ ಕಾಂಬಳೆ ತಂದೆ ಯಲ್ಲಪ್ಪ ಕಾಂಬಳೆ- ಜನತಾದಳ(ಯು), ಧನಲಕ್ಷ್ಮೀ ರಾಠೋಡ ಗಂಡ ಫತ್ತೇಸಿಂಗ್ ರಾಠೋಡ- ವೆಲಫೇರ್ ಪಾರ್ಟಿ ಆಫ್ ಇಂಡಿಯಾ.
ಸೇಡಂ: ವೈಜನಾಥ ಪಾಟೀಲ್ ತಂದೆ ಸಂಗಪ್ಪ ಪಾಟೀಲ್- ಕೆಜೆಪಿ, ಶಿವಕುಮಾರ ವೀರಶೆಟ್ಟೆಪ್ಪ- ಬಿಜೆಪಿ, ಅಮೃತಪ್ಪ ತಂದೆ ಬಸಪ್ಪ- ಸಮಾಜವಾದಿ ಪಾರ್ಟಿ.
ಚಿಂಚೋಳಿ(ಎಸ್ಸಿ ಮೀಸಲು): ಬಸವರಾಜ ತಂದೆ ನಾಗಪ್ಪ ಅನ್ವರಕರ್- ಪಕ್ಷೇತರ, ಬಸವರಾಜ ತಂದೆ ಮಲ್ಲಯ್ಯ-ಪಕ್ಷೇತರ, ರಮೇಶ ಯಾಕಾಪುರ ತಂದೆ ಶರಣಪ್ಪ ಯಾಕಾಪುರ- ಬಿಜೆಪಿ, ಸಂದೀಪ ಚವ್ಹಾಣ ತಂದೆ ಬಾಬು ಚವ್ಹಾಣ- ಪಕ್ಷೇತರ, ಓಂರಾಜ ತಂದೆ ಲೋಕೇಶ- ಪಕ್ಷೇತರ
ಗುಲ್ಬರ್ಗ ಗ್ರಾಮಾಂತರ(ಎಸ್ಸಿ ಮೀಸಲು): ನಿಂಗಣ್ಣ ತಂದೆ ಸಾಯಬಣ್ಣ- ಎಸ್ಯುಸಿಐ(ಸಿ).
ಗುಲ್ಬರ್ಗ ದಕ್ಷಿಣ: ಬಸವರಾಜ ಚಿಂಚೋಳಿ ತಂದೆ ರೇವಪ್ಪ ಚಿಂಚೋಳಿ- ಪಕ್ಷೇತರ, ಅಬ್ದುಲ್ ವಾಹಬ್ ತಂದೆ ಅಬ್ದುಲ್ ಸಲಾಂ- ಪಕ್ಷೇತರ, ವೆಂಕಟೇಶ ತಂದೆ ಲಕ್ಷ್ಮಣರಾವ- ಪಕ್ಷೇತರ, ಶೀತಲ್ ಹೀರಾಪುರ ಗಂಡ ಆನಂದ ಹೀರಾಪುರ- ಸಮಾಜವಾದಿ ಪಾರ್ಟಿ, ವಾಸುದೇವರಾವ ತಂದೆ ಭೀಮರಾವ- ಬಿಎಸ್ಪಿ, ಗುರುದೇವಪ್ಪ ತಂದೆ ಶಂಕರಪ್ಪ- ಪಕ್ಷೇತರ, ಗುರುಶಾಂತ ಪಟ್ಟೇದಾರ ತಂದೆ ಮಲ್ಲಪ್ಪ ಪಟ್ಟೇದಾರ- ಪಕ್ಷೇತರ.
ಗುಲ್ಬರ್ಗ ಉತ್ತರ: ಶಾಮಲಾ ಗಂಡ ಮಲ್ಲಪ್ಪ- ಪಕ್ಷೇತರ, ನಾಸೀರ್ ಹುಸೇನ್ ತಂದೆ ಸಾದತ್ ಹುಸೇನ್- ಕೆಜೆಪಿ, ಮಹ್ಮದ್ ನೂರ್ ತಂದೆ ಎ. ಹಮೀದ್- ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಶೌಕತ್ ಅಲಿ ತಂದೆ ಶೇಖ್ ಸಲೀಂ ಸಾಬ್- ಸಮಾಜವಾದಿ ಪಾರ್ಟಿ, ಸೈಯ್ಯದ್ ಜಾಫರ್ ಹುಸೇನ್ ತಂದೆ ಸೈಯ್ಯದ್ ಗುಲಾಂ ಹುಸೇನ್- ಜನತಾದಳ (ಎಸ್), ಅಬ್ದುಲ್ ರಹೀಂ ಪಟೇಲ್ ತಂದೆ ರಾಜಾ ಪಟೇಲ್- ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ, ಸೈಯ್ಯದ್ ದಸ್ತಗೀರ ತಂದೆ ಸೈಯ್ಯದ್ ಅಲಿ ಸಾಬ್-ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ.
ಆಳಂದ: ಸಿದ್ದಣ್ಣ ತಂದೆ ಶೇಖರಪ್ಪ- ಕಾಂಗ್ರೆಸ್, ಉದಯಕುಮಾರ ತಂದೆ ಗೌಡಪ್ಪ- ಬಿಎಸ್ಆರ್ ಕಾಂಗ್ರೆಸ್, ಖಂಡೇರಾವ ತಂದೆ ಮಾರುತಿ- ಸಮಾಜವಾದಿ ಪಾರ್ಟಿ, ಜಹೀರ್ ತಂದೆ ಇಬ್ರಾಹಿಂ- ಪಕ್ಷೇತರ.
ಏ.17 ನಾಮಪತ್ರ ಸ್ವೀಕರಿಸುವ ಕೊನೆಯ ದಿನವಾಗಿದ್ದು, ಏ.20 ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

