ಗುಲ್ಬರ್ಗಾ

ಈ ಚುನಾವಣೆ ಬದಲಾವಣೆಗೆ ನಾಂದಿ; ವಿಶ್ವಾಸ

Published On :

ಗುರುಮಠಕಲ್: ಈ ಚುನಾವಣೆ ಕ್ಷೇತ್ರದಲ್ಲಿ ಬದಲಾವಣೆಗೆ ನಾಂದಿಯಾಗಲಿದೆ. ಶಾಸಕರ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದು, ಜನ ಬಿಜೆಪಿಗೆ ಮತ ನೀಡುವುದರ ಮೂಲಕ ಹೊಸ ಬದಲಾವಣೆ ತರಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ ಹೇಳಿದರು.
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಹತ್ತಿಕುಣಿ ಗ್ರಾಮದಲ್ಲಿ ಮತಯಾಚನೆ ಸಂದರ್ಭದಲ್ಲಿ ಅನೇಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಗುರುಮಠಕಲ್ ಕ್ಷೇತ್ರದ ಬಗ್ಗೆ ನಾನು ಹಲವಾರು ಕನಸುಗಳನ್ನು ಕಂಡಿದ್ದು, ಅವುಗಳ ನನಸಿಗೆ ನನಗೊಂದು ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಕ್ಷೇತ್ರದ ವಿದ್ಯಾವಂತ ಪದವೀಧರರು ಉನ್ನತ ಅಧಿಕಾರಿಗಳಾಗಬೇಕು. ಪ್ರತಿ ಮನೆಗೆ ಒಬ್ಬರು ಸರ್ಕಾರಿ ನೌಕರರಿರಬೇಕು. ಪ್ರತಿ ಮನೆಗೊಂದು ಶೌಚಾಲಯ ನಿರ್ಮಾಣ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ವ್ಯವಸ್ಥೆ, ಉತ್ತಮ ರಸ್ತೆಗಳ ನಿರ್ಮಾಣ, ಶಿಕ್ಷಣದ ಗುಣಮಟ್ಟ ಸುಧಾರಣೆ ತಮ್ಮ ಕನಸಾಗಿದೆ ಎಂದು ಹೇಳಿದರು.
ಚಿಂಚನಸೂರರ ಸ್ವಹಿತಾಸಕ್ತಿ: ಕಳೆದ 45 ವರ್ಷಗಳಿಂದ ಆಳ್ವಿಕೆ ಮಾಡಿದ ಕಾಂಗ್ರೆಸ್ ನಾಯಕರು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಹಾಲಿ ಶಾಸಕ ಚಿಂಚನಸೂರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡದೆ ಸ್ವಹಿತಾಸಕ್ತಿಯಲ್ಲೇ 5 ವರ್ಷ ಕಳೆದಿದ್ದಾರೆ. ಚುನಾವಣೆ ಬಂದಾಗೊಮ್ಮೆ ಮಾತ್ರ ಪ್ರತ್ಯಕ್ಷರಾಗಿ ಸುಳ್ಳು ಆಶ್ವಾಸನೆಗಳಿಂದ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದರು.

ಪ್ರಜ್ಞಾವಂತರು ಕೆಜೆಪಿಯಿಂದ ದೂರ: ಶಿವಕುಮಾರ ಟೀಕೆ
ಯಾದಗಿರಿ: ಕೆಜೆಪಿ ಮತ್ತಿತರ ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಭವಿಷ್ಯವಿಲ್ಲ ಎಂಬುದನ್ನು ಅರಿತು ನಗರದ ಪ್ರಜ್ಞಾವಂತ ಯುವಕರು ಕೆಜೆಪಿಯಿಂದ ದೂರ ಸರಿದು, ಸರ್ವರಿಗೂ ಒಳಿತನ್ನು ಬಯಸುವ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದಾಗಿ ನಗರಸಭೆ ಸದಸ್ಯ ಶಿವಕುಮಾರ ದೊಡ್ಡಮನಿ ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪ ಪ್ರದೇಶದಲ್ಲಿ ಅನೇಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರವಿ ಶೀಲವಂತ, ಅಶೋಕ ದೇವಿಶೆಟ್ಟಿ, ರವಿ ಬುಕ್ಕಾ, ಬಂದೇಶ್ವರ ಗವಿಮನಿ, ನಾಗರಾಜ ಜಿವಣಗಿ, ಶರಣಪ್ಪ ಕುಪಗಲ್, ಅನೀಲಕುಮಾರ ಲೌಡಿ, ನಾಗಣ್ಣ, ವೆಂಕಟೇಶ ದೊಶೆಟ್ಟಿ, ಬಸವರಾಜ ದೊಶೆಟ್ಟಿ, ಸತೀಶ ಪ್ರಸಾದ, ಬಸವರಾಜ ಎನ್.ಚಾಮಾ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಅವರು ತಿಳಿಸಿದರು. ಅವರನ್ನು ಡಾ. ಎ.ಬಿ. ಮಾಲಕರೆಡ್ಡಿಯವರು ಆತ್ಮೀಯವಾಗಿ ಬರಮಾಡಿಕೊಂಡು, ಕಾಂಗ್ರೆಸ್‌ನಿಂದ ಯಾವತ್ತೂ, ಯಾರಿಗೂ ಕೆಡುಕಾಗದು. ಅದರಲ್ಲೂ ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ನಿಮ್ಮಂತಹ ಯುವಕರು ಕೆಜೆಪಿ ತೊರೆದದ್ದರಿಂದ ಆ ಪಕ್ಷ ಕ್ಷೇತ್ರದಲ್ಲಿ ಛಿದ್ರವಾಗುವುದು ಖಚಿತ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುರೇಶ ಜೈನ, ರವಿ ಮಾಲಿಪಾಟೀಲ, ಶಿರಾಜ ಜಕಾತಿ, ರಾಹುಲ ಅರಿಕೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.