'ಸಂವಿಧಾನ ದೇಶದ ಜನರಿಗೆ ಧರ್ಮಗ್ರಂಥ'
ಕೆಂಭಾವಿ: ಸಂವಿಧಾನವು ಸಮಸ್ತ ಭಾರತೀಯರಿಗೆ ಧರ್ಮಗ್ರಂಥವಿದ್ದಂತೆ. ಅದನ್ನು ತಿಳಿದು ನಾವು ಮುನ್ನಡೆಯಬೆಕು. ಸಂವಿಧಾನ ರಚನೆ ಮಾಡಿದ ಡಾ. ಅಂಬೇಡ್ಕರರು ದೇಶದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಂವಿಧಾನವೆಂಬ ಮಹತ್ವದ ಗ್ರಂಥವನ್ನು ನಮಗೆ ನೀಡಿದ್ದಾರೆ. ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಡಾ. ಯಂಕನಗೌಡ ಪೊಲೀಸ್ ಪಾಟೀಲ ಹೇಳಿದರು. ಸಮೀಪದ ಮಾಳಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋಬಳಿ ಶಾಖೆ ಏರ್ಪಡಿಸಿದ್ದ ಅಂಬೇಡ್ಕರ್ ಅವರ 122ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಿಂಗನಗೌಡ ಮಾಲಿಪಾಟೀಲ ವಹಿಸಿದ್ದರು. ಗುರಣ್ಣಗೌಡ ಬಿರಾದಾರ, ಕೆಂಜೊಂಡೆಪ್ಪ ಹೊಂಬಳಕಳ, ಧರ್ಮಣ್ಣ ಬಡಿಗೇರ, ಸಿದ್ದಣ್ಣ ಯತ್ನಾಳ, ಜೆಟ್ಟೆಪ್ಪ ಬಸರಿಗಿಡ, ಬಸವರಾಜ ಮಾಳಳ್ಳಿಕರ ಇದ್ದರು. ನಿಂಗಪ್ಪ ವಾಡಿ, ಸ್ವಾಗತಿಸಿ, ವಂದಿಸಿದರು.
ಬೆಳ್ಳಿಹಬ್ಬ ಇಂದು
ಸೇಡಂ: ವಿಶ್ವಕರ್ಮ ಸಮಾಜ ಸಂಸ್ಥಾಪನೆಯ ಬೆಳ್ಳಿ ಹಬ್ಬ, ವಿಶ್ವಕರ್ಮ ಭಗವಂತನ ಪೂಜೆ ಮತ್ತು ಶ್ರೀಕಾಳಿಕಾದೇವಿ ಮಹೋತ್ಸವ ಕಾರ್ಯಕ್ರಮವು ಏ.19 ರಂದು ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 5ಕ್ಕೆ ಶ್ರೀಕಾಳಿಕಾದೇವಿಗೆ ಹರೀದ್ರಾ- ಕುಂಕುಮಾರ್ಚನೆ ಹಾಗೂ ವಿಶೇಷ ಪುಷ್ಪಾಲಂಕಾರ, 6.30ಕ್ಕೆ ವಿಶ್ವಕರ್ಮ ಸಮಾಜದ ಧ್ವಜಾರೋಹಣ, ಪಲ್ಲಕ್ಕಿ ಮೆರವಣಿಗೆ ನಡೆಯುವುದು. 8.30ಕ್ಕೆ ವಿಶ್ವಕರ್ಮ ಭಗವಂತನ ಮಹಾಪೂಜೆ, ಗಣಪತಿ ಪೂಜೆ, ಪಂಚಬ್ರಹ್ಮ, ನವಗ್ರಹ ಹಾಗೂ ದಿಕ್ಸಾಲಕರ ಪೂಜೆ, ಅಗ್ನಿಪ್ರತಿಷ್ಠ, ಸುಮಂಗಳೆಯರ ಪೂಜೆ ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗುವುದು.
ಬೈಕ್ನಿಂದ ಬಿದ್ದು ವ್ಯಕ್ತಿ ಸಾವು
ಕೆಂಭಾವಿ: ಬೈಕ್ ಸವಾರಿ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಂಭಾವಿ- ಯಾಳಗಿ ಮಾರ್ಗದಲ್ಲಿ ಗುರುವಾರ ನಡೆದಿದೆ. ಚಂದ್ರಶೇಖರ ಮಲ್ಲಣ್ಣ ಕೋಳೂರ(30) ಮೃತಪಟ್ಟ ವ್ಯಕ್ತಿ. ಇವರು ಸುರಪುರ ತಾಲೂಕಿನ ಕೋನಾಳ ಗ್ರಾಮದವರೆಂದು ಗುರುತಿಸಲಾಗಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

