ಗುಲ್ಬರ್ಗಾ

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ

Published On :

ಸೇಡಂ: ಸೇಡಂ ವಿಧಾನಸಭಾ ಕ್ಷೇತ್ರದ ಚಿಂಚೋಳಿ ತಾಲೂಕಿನ ಬೂತಪುರ ಮತ್ತು ಚಿಂತಪಳ್ಳಿ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
  ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಮತ್ತು ತಾಲೂಕಾಧ್ಯಕ್ಷ ನಾಗೇಂದ್ರಪ್ಪ ದುಗನೂರ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಅಣ್ಣಾರಾವ ಬಾಗೋಡಿ, ಚಂದ್ರಕಾಂತ ಬಿರಾದಾರ, ಯಲ್ಲಪ್ಪ ಪೂಜಾರಿ, ಜಗನ್ನಾಥ ಪೂಜಾರಿ, ಸಿದ್ದಪ್ಪ ಪೂಜಾರಿ, ಕಲ್ಲಪ್ಪ ಪೂಜಾರಿ, ಭೀಮರಾವ ತಳವಾರ, ಮಲ್ಲಿಕಾರ್ಜುನ ಗುತ್ತೇದಾರ, ಅಮೃತ ಪೂಜಾರಿ, ಗುಂಡಪ್ಪ ಮಡಿವಾಳ, ಶರಣಪ್ಪ ಭಂಡಿ, ಶಿವಶರಣಪ್ಪ ಗೊಡಿ, ಶಾಂತಪ್ಪ ಜಿಂಗಿ, ಪೀರಪ್ಪ ಹೊಸಮನಿ, ನಾಗಪ್ಪ ನಾಟೀಕಾರ, ಶರಣಪ್ಪ ದಂಡಪ್ಪ, ಶಾಂತಪ್ಪ ಹಳಿಸಾಗರ, ಪ್ರಭು ಜಿಂಗಿ, ಸೂರ್ಯಕಾಂತ ನಾಟೀಕಾರ, ಸೂರ್ಯಕಾಂತ ಗುತ್ತೇದಾರ, ಸಂತೋಷ ದೊಡ್ಡಮನಿ, ಸಲಿಂ ಕಂಬಾರ, ಸಿದ್ದಣ್ಣ ಬಿರಾದಾರ, ಶಬ್ಬಿರ್ ಮುಸ್ತಾಜರ್, ಮಲ್ಲಿಕಾರ್ಜುನ ಗುತ್ತೇದಾರ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾಂಗ್ರೆಸ್, ಜೆಡಿಎಸ್‌ಗೆ 'ಠೂ'
ಜೇವರ್ಗಿ: ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ತಾಲೂಕಿನ ಹಾಲಗಡ್ಲಾ, ಯಾಳವಾರ, ಕೊಡಚಿ ಗ್ರಾಮದಲ್ಲಿನ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಎಂ.ಬಿ. ಪಾಟೀಲ್ ಹರವಾಳ ತಿಳಿಸಿದ್ದಾರೆ.ಹಾಲಗಡ್ಲಾದ ಕಾಂಗ್ರೆಸ್‌ನ ಮಾಳಪ್ಪ ದೇಸಾಯಿ, ಪ್ರಕಾಶ ಯಮನಪ್ಪ, ಸಿದ್ದು ತಿರುಪತಿ, ಪರಶುರಾಮ ಕೆಲ್ಲೂರ, ಶರಣಯ್ಯ ಬಣಮಿ, ಮಲೇಶ ಪೂಜಾರಿ ಸೇರಿದಂತೆ ಅನೇಕರು ಸೇರ್ಪಡೆಯಾದರು.
ಯಾಳವಾರದ ಗುರಪ್ಪ ನರಿಬೋಳಿ, ಮಲ್ಲಪ್ಪ ಬಡಿಗೇರ, ಶರಣಪ್ಪ ಶಿವನಳ್ಳಿ, ಶಂಕರೆಪ್ಪ ದೊಡ್ಮನಿ ಮತ್ತು ಕೊಡಚಿಯ ಅಯ್ಯಪ್ಪ ಟಣಕೆದಾರ್, ಸಿದ್ರಾಮ ಸಿದ್ದಪುರ, ನಂದಪ್ಪ ಗುರಿಕಾರ, ಸಿದ್ದು ಕವಾಲ್ದಾರ, ಶರಣಪ್ಪ ಮದರಿ, ಬಸಪ್ಪ ಕವಾಲ್ದಾರ  ಬಿಜೆಪಿ ಸೇರ್ಪಡೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.