ಪತಿ ಪರವಾಗಿ ಮತ ಯಾಚಿಸಿದ ಭಾರತಿ ದರ್ಶನಾಪುರ
ಶಹಾಪುರ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸವಪ್ಪಗೌಡ ದರ್ಶನಾಪುರ ಅವರಿಗೆ ಮತ ಹಾಕುವಂತೆ ಅವರ ಪತ್ನಿ ಭಾರತಿ ದರ್ಶನಾಪುರ ಮತ ಯಾಚಿಸುತ್ತಿದ್ದಾರೆ.
ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ, ಮತದಾರರ ಮನೆ ಬಾಗಿಲಿಗೆ ಹೋಗಿ ಪತಿಯ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಕಾರ್ಯಕರ್ತೆಯರೊಂದಿಗೆ ಮನೆಮನೆಗೆ ಭೇಟಿ ನೀಡಿ ದರ್ಶನಾಪುರ ಅವರಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಶುಕ್ರವಾರ ಪಟ್ಟಣದ ಲಕ್ಷ್ಮಿನಗರ, ಎಸ್.ಬಿ. ನಗರ, ಗಣೇಶ ನಗರ, ಬುದ್ಧ ನಗರ ಹಾಗೂ ಚರ್ಚ್ ಪ್ರದೇಶದಲ್ಲಿ ಅವರು ಮತಯಾಚನೆ ಮಾಡಿದರು. ಮಹಿಳಾ ಕಾಂಗ್ರೆಸ್ ಸದಸ್ಯರಾದ ವಿಮಲಾ ಕಲಬುರ್ಗಿ, ನಿರ್ಮಲಾ ಉಪ್ಪಿನ್, ರಾಜೇಶ್ವರಿ ಪಿ. ಶೆಟ್ಟಿ, ಸರಸ್ವತಿ ಬಿರಾದಾರ, ಪುಷ್ಪಾ ತುಂಬಗಿ, ರೇಣುಕಾ ಚಟ್ಟರಕಿ, ಸಂಗಮ್ಮ ಶೆಟ್ಟರ, ಹಣಮಂತಿ ಗುತ್ತೇದಾರ, ಪುರಸಭೆ ಸದಸ್ಯೆ ಅರ್ಚನಾ ಚಿಲ್ಲಾಳ, ಖಮ್ರುನಿಸಾ ಬೇಗಂ, ಸಲೀಮಾಬೇಗಂ, ರತ್ನಾ ದಂಡು, ಶಶಿಕಲಾ ಉಕ್ಕಿನಾಳ, ನೀಲಮ್ಮ ಚೌದ್ರಿ ಇತರರು ಭಾರತಿ ದರ್ಶನಾಪರ ಜತೆಗಿದ್ದು, ಮತ ಯಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

