ಬಿಜೆಪಿಯಿಂದ ಬೇಸತ್ತು ಕಾಂಗ್ರೆಸ್ನತ್ತ ಜನರ ಒಲವು: ಪಾಟೀಲ್
11 ಗ್ರಾಮಗಳಲ್ಲಿ ಕಾಂಗ್ರೆಸ್ ಪ್ರಚಾರ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.20
ರಾಜ್ಯ ಬಿಜೆಪಿ ಸರ್ಕಾರದ ಸಚಿವ, ಶಾಸಕರು ಕೇವಲ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಮತದಾರರು ಬೇಸತ್ತು ಕಾಂಗ್ರೆಸ್ಗೆ ಬೆಂಬಲಿಸಲಿದ್ದಾರೆ ಎಂದು ಸೇಡಂ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕಿನ ಅಲ್ಲೂರ್(ಕೆ) ಗ್ರಾಮದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 5 ವರ್ಷದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸದೆ ಬೊಕ್ಕಸ ಖಾಲಿ ಮಾಡಿದೆ ಎಂದರು.
ಕಾರ್ಯಕರ್ತರಿಗೆ ಕರೆ: ಹೈ-ಕ ಪ್ರದೇಶಕ್ಕೆ 371ನೇ ಕಲಂ ಜಾರಿ ಮಾಡಿದ ಕೇಂದ್ರ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಒತ್ತು ನೀಡಿದೆ ಎಂದ ಅವರು ಪ್ರಿಯಾಂಕ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾಗನಗೌಡ ಪಾಟೀಲ್, ಗುರುರಾಜ ಜೋಶಿ, ಗುಂಡು ಕುಲಕರ್ಣಿ, ಶಾಂತಪ್ಪ ಚಾಳಿಕರ್, ಜಗಣ್ಣಗೌಡ, ಶರಣು ಹುಗಾರ, ಶರಣಗೌಡ ಭೀಮನಳ್ಳಿ, ಬಸಣ್ಣಗೌಡ, ಸುಭಾಷಗೌಡ ಪಸಾರ, ವೆಂಕಟರೆಡ್ಡಿ, ಮಲ್ಲಿಕಾರ್ಜುನ, ಭೀಮಶಾ, ತಾಲೂಕಿನ ಭೀಮನಳ್ಳಿ, ರಾಮತೀರ್ಥ, ರಾಜೋಳ್ಳ, ಅಲ್ಲೂರ (ಬಿ), ಅಳ್ಳಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಬಾಗಣ್ಣಗೌಡ ಠಾಣಗುಂದಿ, ವಕೀಲರೆಡ್ಡಿ ಅಂಬರಪ್ನೋರ, ಗಂಗಾಧರ ಕರದಾಳ, ಚನ್ನಬಸಪ್ಪಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

