ಜೆಡಿಎಸ್ ರೈತ, ಬಡವರ ಪರ ಪಕ್ಷ: ಕಾಡ್ಲೂರ್
ಯಾದಗಿರಿ: ರಾಜ್ಯದ ರೈತರ, ಬಡವರ ಪರವಾಗಿ ಚಿಂತನೆ ನಡೆಸುವ ಏಕೈಕ ಪಕ್ಷ ಜಾತ್ಯತೀತ ಜನತಾ ದಳ ಎಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎ.ಸಿ. ಕಾಡ್ಲೂರ್ ಹೇಳಿದರು. ಜೆಡಿಎಸ್ ಮುಖಂಡ ಹಣಮಂತರಾಯಗೌಡ ತೇಕರಾಳ ಅವರ ನೇತೃತ್ವದಲ್ಲಿ ಹಾಲಗೇರಾ ಗ್ರಾಮದ ಪ್ರಮುಖರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಜನಪರ ಕೆಲಸಗಳನ್ನು ಮಾಡವಲ್ಲಿ ವಿಫಲವಾಗಿದೆ. ಕೇವಲ 20 ತಿಂಗಳು ಅಧಿಕಾರ ಮಾಡಿದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಜೆಡಿಎಸ್‌ನತ್ತ ಜನರ ಒಲವು ಹೆಚ್ಚಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ಸಮಸ್ಯೆಗೆ ಸ್ಪಂದಿಸಲು ಜೆಡಿಎಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು. ನಂತರ ವಿವಿಧ ಪಕ್ಷದ ಹಾಲಗೇರಾ ಗ್ರಾಮದ ಪ್ರಮುಖರಾದ ಹೊನಪ್ಪ ಯಡ್ಡಳ್ಳಿ, ಬಸವರಾಜ, ಸಿದ್ದಪ್ಪ, ಇಮಾಮಸಾಬ ಚೌದರಿ, ನಾಗಪ್ಪ ಯಡ್ಡಳ್ಳಿ, ಮರಿಗೌಡ, ಭೀಮಪ್ಪ ಮಾಚನೂರ, ಮಲ್ಲಪ್ಪ ಯಡಹಳ್ಳಿ, ಸಿದ್ದಪ್ಪ ದೊರಿ, ಸಾಬಣ್ಣ ದೊರಿ, ಮಹ್ಮದ್‌ಸಾಬ ಗೂಡಸಾ, ಮಲ್ಲಿಕಾರ್ಜುನ ತಾತಳಗೇರಾ, ಹಣಮಂತ ಚಿಕ್ಕಬಾದೂರ, ಮೈಲಾರಪ್ಪ ಪೂಜಾರಿ ಇತರರು ಪಕ್ಷ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

