ರಾಜುಗೌಡ ರೋಡ್ ಶೋ ಮೂಲಕ ಮತ ಯಾಚನೆ
ಸುರಪುರ: ಇಲ್ಲಿಗೆ ಸಮೀಪದ ರಂಗಂಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಭಾನುವಾರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಹಸನಾಪುರ, ದೂಲಪೇಟ, ಪರ್ನಾಲ ಮೋಹಲ್ಲಾ, ಮಂಗಲ ಬಜಾರ, ಬೀಚ ಮೋಹಲ್ಲಾ, ಶರ್ಕಿ ಮೊಹಲ್ಲಾ ಸೇರಿದಂತೆ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸುಮಂಗಲೆಯರು ರಾಜುಗೌಡರಿಗೆ ಆರತಿ ಬೆಳಗಿ ತಿಲಕವಿಟ್ಟು ಆಶೀರ್ವದಿಸಿದರು. ಇನ್ನೂ ಕೆಲಕಡೆ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ರಾಜುಗೌಡ ಮಾತನಾಡಿ, ನಿಮ್ಮೆಲ್ಲರ ಮಮತೆ, ಪ್ರೀತಿ, ಸಹಕಾರ ಇದು ಯಾವ ಜನ್ಮದ ಋಣಾನುಬಂಧವೋ ಗೊತ್ತಿಲ್ಲ. ನನ್ನ ಹೆತ್ತ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿ ನೀಡಿದ್ದೀರಿ.
ನೀವು ತೋರುವ ಪ್ರೀತಿ ಶಾಸಕ, ಸಚಿವ ಸ್ಥಾನಕ್ಕಿಂತಲೂ ಮಿಗಿಲಾದದ್ದು. ನಿಮ್ಮ ಪ್ರೀತಿಯಿಂದ ನನ್ನ ಕಣ್ಣು ತೆರೆಯಿಸಿದ್ದೀರಿ. ರಾಜಕೀಯ ಸ್ಥಾನಮಾನ, ಗೌರವ ತಂದುಕೊಟ್ಟ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಯನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವೇ ಇಲ್ಲ.
ನಿಮ್ಮ ಋಣ ತೀರಿಸಲು ನನಗೆ ಮತ್ತೊಮ್ಮೆ ಆಶೀರ್ವದಿಸಿ ನಿಮ್ಮ ಸೇವೆ ಮಾಡುವ ಸೌಭಾಗ್ಯ ಒದಗಿಸಿಕೊಡಿ ಎಂದು ಭಾವುಕರಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ವಾರ್ಡ್ಗಳಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಮುಖಂಡರಾದ ರಾಜಾ ಹನುಮಪ್ಪನಾಯಕ, ಚಂದ್ರಕಾಂತ ಕಡೇಚೂರು, ವೇಣುಮಾಧವನಾಯಕ, ಚಂದ್ರಶೇಖರ ಜಡಿಮರಳ್, ಏಜಾಜ್ ಅಹ್ಮದ ಚಿದ್ರಿ, ಲಲಿತ ಭಂಡಾರಿ, ನೂರುಲ್ಲಾ ಹಸನ್, ಜೀವ್ಹೇಶ್ವರ ಟೊಣಪೆ. ಚಂದ್ರಕಾಂತ ಪಾಡುಮುಖಿ, ರಾಮಚಂದ್ರ ಪಾಡುಮುಖಿ, ಭೀಮಾಶಂಕರ ಬಿಲ್ಲವ್, ಪಾರಪ್ಪ ಗುತ್ತೇದಾರ್, ನರಸಿಂಹಕಾಂತ ಪಂಚಮಗಿರಿ, ತಾತಯ್ಯ ಕಡಬೂರು, ಸೋಮರಾಯ ಶಾಖಾಪುರ, ಹಣಮಂತ ಚಂದನಕೇರಿ, ಶ್ರೀರಂಗ ಮಿರಿಯಾಲ್, ವೆಂಕಟೇಶ ಗದ್ವಾಲ್ ಹಲವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

