ಗುಲ್ಬರ್ಗಾ

ಪುತ್ರನ ಗೆಲವಿಗೆ ಅರುಣಾ ಕ್ಷೇತ್ರಾದ್ಯಂತ ಪಾದಯಾತ್ರೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.21
ಜಿದ್ದಾಜಿದ್ದಿ ರಾಜಕೀಯದ ಪರಾಕಾಷ್ಠೆ ತಲುಪಿರುವ ಇಲ್ಲಿನ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲೀಗ ಬಿಜೆಪಿ ಹುರಿಯಾಳು ದತ್ತು ಪಾಟೀಲ್ ಮನೆಗಳಿಗೆ ತೆರಳಿ ಮತ ಯಾಚಿಸಲಾರಂಭಿಸಿದ್ದಾರೆ. 2010 ರಲ್ಲಿ ಈ ಕ್ಷೇತ್ರ ಕಂಡ ಉಪ ಚುನಾವಣೆಯಲ್ಲಿ ಪತಿ ದಿ. ಚಂದ್ರಶೇಖರ ರೇವೂರ ನಿಧನ ನಂತರದ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದ, ಅರುಣಾ ಪಾಟೀಲ್ ಇದೀಗ ತಮ್ಮ ಪುತ್ರನ ಬದಲಾದ ರಾಜಕೀಯ ನಿಲುವು- ಒಲವುಗಳಿಗೆ ತಕ್ಕಂತೆ ಸ್ಪಂದಿಸುತ್ತ ತಾವೇ ಖುದ್ದಾಗಿ ಕ್ಷೇತ್ರಾದ್ಯಂತ ಪಾದಯಾತ್ರೆ ಆರಂಭಿಸಿದ್ದಾರೆ.
2010 ರ ಉಪ ಚುನಾವಣೆಯಲ್ಲಿ ದತ್ತು ಪಾಟೀಲ್ ಅವರೇ ಮುಂದಾಗಿ ಜೆಡಿಎಸ್‌ನಿಂದ ತಮ್ಮ ತಾಯಿಯ ಪರವಾಗಿ ಟಿಕೆಟ್ ಪಡೆದು ಕಣಕ್ಕಿಳಿಸಿದ್ದರು. ಜಯಭೇರಿಯನ್ನೂ ಭಾರಿಸಿದ್ದರು. ಈ ಬಾರಿ ಕೊನೆ ಹಂತದಲ್ಲಿ ಜೆಡಿಎಸ್ ಟಿಕೆಟ್ ನಿರಾಕರಿಸಿ ಬಿಜೆಪಿಗೆ ಬಂದ ದತ್ತಾತ್ರೇಯ ರೇವೂರ ಈ ಬಾರಿ ನಮೋಶಿ ವಿರುದ್ಧ ರಾಜಕೀಯವಾಗಿ ಈ ಕ್ಷೇತ್ರದಲ್ಲಿ ಸೆಡ್ಡು ಹೊಡೆದಿದ್ದಾರೆ.
ಇತ್ತ ಶಶೀಲ್ ನಮೋಶಿಯವರೂ ದತ್ತಾತ್ರೇಯ ಪಾಟೀಲರಿಗೆ ರಾಜಕೀಯವಾಗಿಯೇ ಉತ್ತರಿಸುವ ದಿಶೆಯಲ್ಲಿ ಸನ್ಧರಾಗಿದ್ದು ಅವರೀಗ ಬಿಜೆಪಿ ತೊರೆದು ಜೆಡಿಎಸ್ ಸೇರಿ ಕಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ರಾಜಕೀಯದಿಂದಾಗಿ ಗುಲ್ಬರ್ಗ ದಕ್ಷಿಣ ಚಿತ್ರಣ ಸಂಪೂರ್ಣ ಬದಲಾಗಿದ್ದು, ಜಿದ್ದಾಜಿದ್ದಿ ರಾಜಕೀಯಕ್ಕೆ ಸಾಕ್ಷಿಯಾಗಿದೆ.
ಇತ್ತ ದತ್ತಾತ್ರೇಯ ಪಾಟೀಲ್ ಅವರೂ ವಿಠ್ಠಲ ನಗರ, ಬ್ರಹ್ಮಪುರ, ಸಂಗಮೇಶ್ವರ ಕಾಲೋನಿ ಸೇರಿದಂತೆ ಬಿಜೆಪಿ ಒಲವಿರುವಂತಹ ಬಡಾವಣೆಗಳಲ್ಲಿ ಬಿರು ಬಿಸಿಲಲ್ಲೇ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ಇವರೊಂದಿಗೆ ಜಿಡಿಎ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್ ಸೇರಿದಂತೆ ಅನೇಕ ಹಿರಿಯ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.