'ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ'
ಹುಣಸಗಿ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿ ಜನ ಸಾಮಾನ್ಯರ ಕಷ್ಟಗಳನ್ನು ಅರಿತಿದ್ದಾರೆ. ಸ್ಥಿರ ಹಾಗೂ ಸುಭದ್ರ ಸರ್ಕಾರಕ್ಕೆ ಅವರ ಕೈ ಬಲಪಡಿಸಬೇಕಿದೆ. ಸುರಪುರದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ರಾಜುಗೌಡ ಮನವಿ ಮಾಡಿದರು.
ಕಲ್ಲದೇವನಹಳ್ಳಿ, ಚನ್ನೂರ, ವಜ್ಜಲ್, ಶ್ರೀನಿವಾಸಪುರ, ಕನಗಂಡನಹಳ್ಳಿ, ಕಕ್ಕೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ರಾಜುಗೌಡ ಮತ ಯಾಚಿಸಿದರು.
ಉತ್ತಮ ಪ್ರತಿಕ್ರಿಯೆ: ಸುರಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಬೇಕು. ಪ್ರತಿಯೊಂದು ಗ್ರಾಮಗಳಲ್ಲಿಯೂ ಜೆಡಿಎಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿಯೂ ಕ್ಷೇತ್ರದ ಜನತೆ ನನ್ನನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸುತ್ತಾರೆಂಬ ವಿಶ್ವಾಸವಿದೆ. ತಾಲೂಕಿನಲ್ಲಿ ಕುರುಬ ಸಮಾಜಕ್ಕೆ ಎಲ್ಲ ರೀತಿಯ ಪ್ರಾತಿನಿಧ್ಯ ನೀಡಿದ್ದು, ಎಳ್ಲ ಜಾತಿ ಜನಾಂಗದವರಿಂದ ಬೆಂಬಲ ವ್ಯಕ್ತವಾಗುತ್ತಿದೆ.
ತಮ್ಮ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಬಾರಿ ಆಯ್ಕೆ ಮಾಡಿದರೆ ಸಮಗ್ರ ಚಿತ್ರಣವನ್ನೇ ಬದಲಾಯಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಭೋವಿ ವಡ್ಡರ್ ಸಮಾಜದ ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಪಾದಯಾತ್ರೆಯಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ನಾಗಣ್ಣ ದಂಡಿನ್, ವೀರೇಶ ಚಿಂಚೋಳಿ, ಸಂಗನಗೌಡ ವಜ್ಜಲ್, ಮೋತಿಲಾಲ ಚವ್ಹಾಣ, ಯಲ್ಲಪ್ಪ ಕುರಕುಂದಿ, ಚಂದ್ರಶೇಖರ ಪಟ್ಟಣಶೆಟ್ಟಿ, ಸಂತೋಷ ಹುಂಡೇಕಾರ, ದೊಡ್ಡಅಪ್ಪುಗೌಡ ಪಾಟೀಲ, ಬಾಬು ಸುರಪುರ ಸೇರಿದಂತೆ ಅನೇಕರು ರಾಜುಗೌಡರ ಪಾದಯತ್ರೆಯಲ್ಲಿ ಸಾಥ್ ನೀಡಿದರು.
ಮಲ್ಲಿಕಾರ್ಜುನ ಗೌಂಡಿ, ಪಲ್ಲೆಪ್ಪ ಗೌಂಡಿ, ಮುದಕಪ್ಪ ಗೌಂಡಿ, ಶ್ರೀಶೈಲ, ಬಸವರಾಜ ಆಲಮೇಲ, ಹುಸೇನಿ ಆಲಮೇಲ, ಭೀಮಣ್ಣ, ದೇವಪ್ಪ ಮುದನೂರ, ಯಮನಪ್ಪ ಮುದನೂರ, ನಾಗಪ್ಪ ಯಡಹಳ್ಳಿ, ನಾಗೇಶ, ಸೋಮಣ್ಣ, ಲಕ್ಷ್ಮಣ, ಶರಣು, ಶರಣಪ್ಪ ಯಾಳಗಿ, ಯಮನಪ್ಪ ತುಂಬಗಿ, ಯಂಕಪ್ಪ ತುಂಬಗಿ, ವಿರುಪಾಕ್ಷಿ ಬೂದನೂರ ಮತ್ತಿತರರು ಜೆಡಿಎಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

