ಈ ಬಾರಿಯೂ ನನ್ನ ಗೆಲವು ಖಚಿತ: ರಾಜುಗೌಡ
ಸುರಪುರ: ನಾನು ಕ್ಷೇತ್ರದ ಜನತೆಯನ್ನು ಸಮಾನವಾಗಿ ಕಾಣುವ ವ್ಯಕ್ತಿ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ದಕ್ಷ, ಪ್ರಾಮಾಣಿಕ ಆಡಳಿತವೇ ನನ್ನ ಮುಖ್ಯ ಗುರಿ. ತಾಲೂಕಿನಾದ್ಯಂತ ಜೆಡಿಎಸ್ ಅಲೆ ಎದ್ದಿದ್ದು, ಈ ಬಾರಿಯೂ ನನ್ನ ಗೆಲುವು ಖಚಿತ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ನಾನಾ ಕಡೆ ಚುನಾವಣಾ ಪ್ರಚಾರ ನಡೆಸಿದ ಅವರು, ನಾನು ಜನರ ಜೊತೆಗಿದ್ದು, ಕೆಲಸ ಮಾಡಿದ್ದರಿಂದ ಇಂದು ಮತದಾರರ ಮನಃಸ್ಥಿತಿಯೇ ಬದಲಾಗಿದೆ. ಎರಡು ಅವಧಿಯಲ್ಲಿ ಜನರ ಜೊತೆಗೆ ನಾನು ನಿಂತಿದ್ದೇನೆ. ನನ್ನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೋಡಿ ನನ್ನನ್ನು ಈ ಬಾರಿ ಆಯ್ಕೆ ಮಾಡಲು ಜನ ನಿರ್ಧರಿಸಿದ್ದಾರೆ ಎಂದರು. ಪ್ರತಿ ನಿತ್ಯ ಬೇರೆ ಬೇರೆ ಪಕ್ಷದಿಂದ ಹಲವಾರು ನಾಯಕರು, ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದಲ್ಲಿ ಯಾವುದೇ ಸರ್ಕಾರ ಮಾಡದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನ ಮೆಚ್ಚುಗೆ ಪಡೆದರು. ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಎರಡರಷ್ಟು ಹೆಚ್ಚು ತೆರೆದರು. ಎಲ್ಲಾ ವರ್ಗದವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು. ಪ್ರಸ್ತುತ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಚುನಾಯಿಸಿ, ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುತ್ತೇನೆ. 2 ಬಾರಿ ಆರಿಸಿ ಕಳುಹಿಸಿದ್ದೀರಿ. ನಿಮ್ಮ ಋಣ ನಾನು ಇಟ್ಟು ಕೊಳ್ಳುವುದಿಲ್ಲ ಎಂದು ರಾಜುಗೌಡ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

