ಗುಲ್ಬರ್ಗಾ

ಜಿಲ್ಲೆಯಲ್ಲಿ ಮತದಾನಕ್ಕೆ 8,01,593 ಜನ ಅರ್ಹರು

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.24
ಜಿಲ್ಲೆಯ ನಾಲ್ಕೂ ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, 4,03,040 ಪುರುಷ, 3,98,521 ಮಹಿಳಾ ಹಾಗೂ ಇತರೆ 32 ಸೇರಿದಂತೆ ಒಟ್ಟು 8,01,593 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
  ಸುರಪುರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಅತಿ ಹೆಚ್ಚು 2,20,063 ಮತದಾರರಿದ್ದರೆ, ಶಹಾಪುರದಲ್ಲಿ ಕಡಿಮೆ ಅಂದರೆ 1,88,009 ಮತದಾರರಿದ್ದಾರೆ. ಯಾದಗಿರಿಯಲ್ಲಿ 1,90,493 ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ 2,03,028 ಮತದಾರರಿದ್ದಾರೆ.
  ಸುರಪುರ ಕ್ಷೇತ್ರದಲ್ಲಿ 1,11,873 ಪುರುಷ, 1,08,177 ಮಹಿಳಾ, ಇತರೆ 13 ಮತದಾರರಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ 94,695 ಪುರುಷ, 93,307 ಮಹಿಳಾ ಹಾಗೂ ಇತರೆ 7 ಮತದಾರರಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ 95,052 ಪುರುಷ, 95,432 ಮಹಿಳಾ ಹಾಗೂ ಇತರೆ 9 ಮತದಾರರಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ 1,01,420 ಪುರುಷ, 1,01,605 ಮಹಿಳಾ, ಇತರೆ 3 ಮತದಾರರಿದ್ದಾರೆ.
ಪುರುಷ ಮತದಾರರೇ ಜಾಸ್ತಿ: ಜಿಲ್ಲೆಯಲ್ಲಿ ಮಹಿಳಾ ಮತದಾರರಿಗಿಂತ ಪುರುಷ ಮತದಾರರ ಸಂಖ್ಯೆಯೇ ಜಾಸ್ತಿಯಿದೆ. 4,03,040 ಪುರುಷ ಮತದಾರರಿದ್ದರೆ 3,98,521 ಮಹಿಳಾ ಮತದಾರರಿದ್ದಾರೆ. ಅಂದರೆ ಮಹಿಳಾ ಮತದಾರರಿಗಿಂತ 4,519 ಪುರುಷ ಮತದಾರರು ಹೆಚ್ಚಿದ್ದಾರೆ. ಆದರೆ ಯಾದಗಿರಿ ಮತ್ತು ಗುರುಮಠಕಲ್ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಯಾದಗಿರಿಯಲ್ಲಿ 380 ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ 185 ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ.
63 ಸಾವಿರ ಹೆಚ್ಚು: 2008ರ ಚುನಾವಣೆಗಿಂತ ಈ ಬಾರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ 63,080 ಮತದಾರರು ಹೆಚ್ಚಾಗಿದ್ದಾರೆ. 2008ರ ಚುನಾವಣೆ ವೇಳೆ ಯಾದಗಿರಿಯಲ್ಲಿ 1,71,508, ಗುರುಮಠಕಲ್‌ನಲ್ಲಿ 1,76,798, ಶಹಾಪುರದಲ್ಲಿ 1,74,057, ಸುರಪುರದಲ್ಲಿ 2,16,150 ಮತ ಸೇರಿದಂತೆ ಒಟ್ಟು 7,38,513 ಮತದಾರರಿದ್ದರು. 5 ವರ್ಷದಲ್ಲಿ ಪ್ರತಿ ಕ್ಷೇತ್ರದಲ್ಲಿ ಸುಮಾರು 15 ಸಾವಿರದಂತೆ 63 ಸಾವಿರ ಮತದಾರರು ಹೆಚ್ಚಾಗಿದ್ದಾರೆ.

ಪ್ಯಾರಾ ಗ್ಲೈಡರ್‌ನಿಂದ ಮತದಾನ ಜಾಗೃತಿ..

ಯಾದಗಿರಿ: ಮತದಾನ  ಹಕ್ಕು   ಚಲಾಯಿಸುವಜಾಗೃತಿ  ಆಂದೋಲನ ಅಂಗವಾಗಿ ನಗರದಲ್ಲಿ ಬುಧವಾರ ಪ್ಯಾರಾ ಗ್ಲೈಡರ್ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಬುಧವಾರ ಬೆಳಗ್ಗೆ ಪ್ಯಾರಾ ಗ್ಲೈಡಿಂಗ್ ಹಾರಾಟಕ್ಕೆ ಚಾಲನೆ ನೀಡಿದರು. ತಂಡದ ಮುಖ್ಯಸ್ಥ ನಿಕೋಲಾಯ್ ಸಿಂಗ್ ನೇತೃತ್ವದ ಈ ತಂಡದಲ್ಲಿ 7 ಸಿಬ್ಬಂದಿ ಮತ್ತು 2 ಚಾಲಕರಿದ್ದರು. ಪ್ಯಾರಾ ಗ್ಲೈಡರ್ ಮೂಲಕ ಯಾದಗಿರಿ ನಗರ, ಅಕ್ಕಪಕ್ಕದ ಗ್ರಾಮಗಳ ಆಗಸದಲ್ಲಿ ಹಾರಾಡಿ, ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಎಸೆಯಲಾಯಿತು.
3 ಚಕ್ರಗಳನ್ನು ಒಳಗೊಂಡ ಸೈಕಲ್ ಮಾದರಿಯ ವಾಹನ ಹಾಗೂ ಅದರ ಮೇಲಿಂದ ಪ್ಯಾರಾಚೂಟ್‌ನ್ನು ಒಳಗೊಂಡ ಪ್ಯಾರಾ ಗ್ಲೈಡಿಂಗ್ 450 ಕೆಜಿ ಭಾರ ಹೊಂದಿದೆ. ಈ ಪ್ಯಾರಾ ಗ್ಲೈಡಿಂಗ್ ಆಗಸದಲ್ಲಿ ಸತತ 3 ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಹೊಂದಿದ್ದು, ನೆಲದಿಂದ ಐದು ಅಡಿಯಿಂದ 18 ಸಾವಿರ ಅಡಿ ಎತ್ತರದವರೆಗೆ ಹಾರಬಲ್ಲದು. ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲ ಮಾಧ್ಯಮಗಳನ್ನು ಚುನಾವಣಾ ಆಯೋಗ ಬಳಸುತ್ತಿದ್ದು, ಅದಕ್ಕೆ ಪ್ಯಾರಾ ಗ್ಲೈಡಿಂಗ್ ಹೊಸ ಸೇರ್ಪಡೆಯಾಗಿದೆ. ಸಾರ್ವಜನಿಕರು ಪ್ಯಾರಾ ಗ್ಲೈಡಿಂಗ್ ಹಾರಾಟ ನೋಡಲು ಜಿಲ್ಲಾ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.