ಗುಲ್ಬರ್ಗಾ

'ಅಭಿವೃದ್ಧಿ ಕನಸುಳ್ಳವರಿಗೆ ಮತ ನೀಡಿ'

Published On :

ಸುರಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಬಲ ಅಸ್ತ್ರವಾಗಿದೆ. ಅದನ್ನು ಅಭಿವೃದ್ಧಿಯ ಕನಸುಳ್ಳವರಿಗೆ ನೀಡಿದರೆ ನಿಮ್ಮ ಮತದಾನಕ್ಕೊಂದು ಅರ್ಥ ಬರುತ್ತದೆ ಮತ್ತು ಕ್ಷೇತ್ರ ಪ್ರಗತಿ ಕಾಣುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು.
ತಾಲೂಕಿನ ಶಾಂತಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ನನ್ನನ್ನು ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದೀರಿ. ನಾನು ಶಾಸಕನಾಗುವ ಮೊದಲು ಅಧಿಕಾರದಲ್ಲಿದ್ದವರು ಏನು ಕೆಲಸ ಮಾಡಿದ್ದಾರೆ ಮತ್ತು ನನ್ನ ಅಧಿಕಾರವಧಿಯಲ್ಲಿ ನಾನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದು ನಿಮ್ಮ ಮುಂದಿದೆ. ಅವುಗಳನ್ನು ಅಳೆದು ನೋಡಿ ಮತ ನೀಡಿ. ಅಭಿವೃದ್ಧಿಯ ಕನಸು ಇಲ್ಲದವರಿಗೆ ಮತ ನೀಡಿ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.
ಮತ್ತೊಮ್ಮೆ ಅವಕಾಶ ಕೊಡಿ: ರಾಜುಗೌಡ ಮಾಡುವ ಅಭಿವೃದ್ಧಿಯನ್ನು ಸಹಿಸದ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮತ್ತು ಸುಳ್ಳು ವದಂತಿ ಹಬ್ಬಿಸಿ ಮತದಾರರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಜಾತಿ ಬಲವನ್ನೇ ಪ್ರಬಲ ಅಸ್ತ್ರ ಮಾಡಿಕೊಂಡ ವಿರೋಧಿಗಳು ಸೋಲಿನ ಭೀತಿಯಿಂದ ಹತಾಶರಾಗಿ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದಾವುದಕ್ಕೂ ಮತದಾರರು ಕಿವಿಗೊಡಬಾರದು. ಅಭಿವೃದ್ಧಿಪರವಾದ ನನಗೆ ಮತನೀಡಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ಒದಗಿಸಬೇಕೆಂದು ಕೋರಿದರು.
ನನ್ನ ವಿರೋಧಿಗಳು ಅಧಿಕಾರವಿಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದ್ದು, ಕೇವಲ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರವಿದ್ದಾಗ ಏನನ್ನೂ ಮಾಡದವರು ಈಗ ಅಧಿಕಾರ ಪಡೆಯಲು ಇಲ್ಲಸಲ್ಲದ ಆಮಿಷ ಒಡ್ಡಿ ಭರವಸೆ ನೀಡುತ್ತಿದ್ದಾರೆ. ಅವರ ಮಾತಿಗೆ ಮರಳಾಗಬೇಡಿ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.