ನಾಳೆ ಜಿಲ್ಲೆಯಲ್ಲಿ ಬಿಎಸ್‌ವೈ ಪ್ರಚಾರ
ಗುಲ್ಬರ್ಗ: ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಏ. 28ರಂದು ಗುಲ್ಬರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.28ರಂದು ಸಂಜೆ 4.30ಕ್ಕೆ ಬೀದರ್ ಜಿಲ್ಲೆಯಿಂದ ಮಹಾಗಾಂವ ಕ್ರಾಸ್‌ನಲ್ಲಿ ಚುನಾವಣಾ ಪ್ರಚಾರ, 5.45ಕ್ಕೆ ಮಹಾಗಾಂವ್ ಕ್ರಾಸ್‌ನಿಂದ ಗುಲ್ಬರ್ಗಕ್ಕೆ ಆಗಮನ, 6ಕ್ಕೆ ಗುಲ್ಬರ್ಗದಿಂದ ಹೊನ್ನಕಿರಣಗಿಗೆ ಆಗಮಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ. ಸಂಜೆ 7ಕ್ಕೆ ಹೊನ್ನಕಿರಣಗಿಯಿಂದ ಗುಲ್ಬರ್ಗಕ್ಕೆ ಆಗಮಿಸಿ ಗುಲ್ಬರ್ಗ(ದ) ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ರಾತ್ರಿ 8.30ಕ್ಕೆ ಗುಲ್ಬರ್ಗ(ಉ) ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. 9.45ಕ್ಕೆ ಜಗತ್ ಬಡಾವಣೆಯಲ್ಲಿ ಮತದಾರರನ್ನು ಭೇಟಿ ಮಾಡಿ, ಮತ ಯಾಚನೆ ಮಾಡಲಿದ್ದಾರೆಂದು ಮಹಾನಗರ ಜಿಲ್ಲಾಧ್ಯಕ್ಷ ಬಸವರಾಜ ಇಂಗಿನ್ ತಿಳಿಸಿದ್ದಾರೆ.
ನಗರಕ್ಕಿಂದು ಪ್ರಹ್ಲಾದ್ ಜೋಷಿ ಭೇಟಿ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆಂದು ಏ.27ರಂದು ಪ್ರಹ್ಲಾದ್ ಜೋಷಿ ಭೇಟಿ ನೀಡುತ್ತಿದ್ದಾರೆ. ಜೋಷಿ ಅವರು ಸಂಗಮೇಶ್ವರ ಸಭಾಗೃಹದಲ್ಲಿ ಅಂದು ಸಂಜೆ 6ರಿಂದ 7ರವರೆಗೂ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಿಪಿಎಂ, ಸಿಪಿಐಗೆ ರೈತ ಸಂಘದ ಬೆಂಬಲ
ಗುಲ್ಬರ್ಗ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಿಪಿಎಂ, ಸಿಪಿಐ ಅಭ್ಯರ್ಥಿಗಳಿಗೆ ಬೆಂಬಲಿಸಲು ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ ಸಭಾ ತೀರ್ಮಾನ ಕೈಗೊಂಡಿವೆ. ಸಿಪಿಎಂನಿಂದ ಸ್ಪರ್ಧಿಸಿರುವ ಗುಲ್ಬರ್ಗ ಗ್ರಾಮೀಣ ಅಭ್ಯರ್ಥಿ ಮಾರುತಿ ಮಾನ್ಪಡೆ ಮತ್ತು ಸಿಪಿಐನಿಂದ ಸ್ಪರ್ಧಿಸಿರುವ ಜೇವರ್ಗಿ ಕ್ಷೇತ್ರದ ಮಹೇಶಕುಮಾರ ರಾಠೋಡ ಅವರಿಗೆ ಬೆಂಬಲಿಸುವುದಾಗಿ ಮೌಲಾ ಮುಲ್ಲಾ, ಗೌರಮ್ಮ ಪಾಟೀಲ್ ಮತ್ತು ದೊಡ್ಡಪ್ಪ ಕಾಮಾ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್‌ಗಳನ್ನು ಧಿಕ್ಕರಿಸಿ ಸಿಪಿಎಂ- ಸಿಪಿಐ ಅಭ್ಯರ್ಥಿಗಳನ್ನು ಗೆಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಅಭಿವೃದ್ಧಿ ವಂಚಿತ ಅಫಜಲ್ಪುರ; ಟೀಕೆ
ಗುಲ್ಬರ್ಗ: ಮಾಜಿ ಶಾಸಕರಾದ ಎಂ.ವೈ. ಪಾಟೀಲ್, ಮಾಲೀಕಯ್ಯ ಗುತ್ತೇದಾರ ಅವರು ರಾಜಕೀಯ ಜೀವನದಲ್ಲಿ ಅಫಜಲ್ಪುರ ತಾಲೂಕಿನ ಅಭಿವೃದ್ಧಿ ಮಾಡದೇ ತಮ್ಮ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆಂದು ಅಫಜಲ್ಪುರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ವಿಠ್ಠಲ್ ಹೇರೂರ ಆರೋಪಿಸಿದರು. ಅಫಜಲ್ಪುರ ತಾಲೂಕು ಗೊಬ್ಬೂರ(ಬಿ)ಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಫಜಲ್ಪುರ ಕ್ಷೇತ್ರದಲ್ಲಿ ಒಳಪಟ್ಟಿರುವ ಪ್ರತಿ ಗ್ರಾಮಗಳು ಹೀನಾಯ ಸ್ಥಿತಿಯಲ್ಲಿವೆ. ಮೂಲ ಸೌಕರ್ಯಗಳಿಂದ ಜನತೆ ವಂಚಿತರಾಗಿದ್ದಾರೆಂದರು. ಸಾಯಿಬಣ್ಣ ನೀಲಪ್ಪಗೋಳ, ಶಿವರಾಜ ಪಾಟೀಲ್, ಶಿವಕುಮಾರ ನಾಟಿಕಾರ್, ಬಲಭೀಮ ಹೊಸಮನಿ, ದತ್ತು ರಾಠೋಡ, ಚಂದ್ರಕಾಂತ ನಡಕಟ್ಟಿ, ರಮೇಶ ನಾಟಿಕಾರ, ಭಗವಂತಪ್ಪ, ಬಲವಂತ, ಲಕ್ಷ್ಮಣ ಹೇರೂರ, ದತ್ತುಗೌಡ ಪಾಟೀಲ್, ಬಸವರಾಜ, ಅಬ್ದುಲ್ ಖಾದರ್, ಮಹಾಂತಯ್ಯ ಸ್ವಾಮಿ, ದತ್ತಪ್ಪ ಪೂಜಾರಿ, ಮಹಾದೇವ, ಶ್ರೀಪಾದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

