'ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ'
ಹುಣಸಗಿ: ಸ್ಥಿರ ಸರ್ಕಾರ, ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕೇವಲ ಒಂದು ಅವಧಿಯ ಬಿಜೆಪಿ ಸರ್ಕಾರ ಸಾವಿರಾರು ಪಾಪ ಮಾಡಿ ಕರ್ನಾಟಕದ ಸಭ್ಯ ರಾಜಕಾರಣ, ಸುಸಂಸ್ಕೃತಿಗೆ ಅಪಚಾರ ಮಾಡಿದೆ ಎಂದು ಸುರಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಹೇಳಿದರು.
ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿ ಭ್ರಷ್ಟರು, ರೈತರ ಭೂಮಿ ಕಸಿಯುವವರು, ಜೈಲಲ್ಲಿ ಇರುವವರು ನಮ್ಮನ್ನು ಆಳಿದ್ದು ದುರಂತವೇ ಸರಿ. ನೀವು ಕಾಂಗ್ರೆಸ್ಗೆ ಮತ ನೀಡಿ ಜಯಶಾಲಿಯನ್ನಾಗಿ ಮಾಡಿದರೆ, ಈ ಕ್ಷೇತ್ರದಲ್ಲಿ ಸಸ್ಯಶಾಮಲೇ ಸದಾ ಹಸಿರಾಗಿ ನಿಮ್ಮೆಲ್ಲರ ಬಾಳು ನಂದವನವಾಗುವಂತೆ ನಿರಂತರ ಸೇವೆ ಮಾಡುವುದಾಗಿ ಹೇಳಿದರು.
ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ ಮಾತನಾಡಿ, ಹಿರೇ ಹಳ್ಳದ ಸಮೀಪ ಇರುವ 20 ಗ್ರಾಮಗಳ ಪೈಕಿ ಹೆಬ್ಬಾಳ ಒಂದಾದರೂ ಈ ಗ್ರಾಮಗಳಿಗೆ ಕಳೆದ ಇಪ್ಪತ್ತು ವರ್ಷದಿಂದ ಜಮೀನುಗಳಿಗೆ ನೀರಾವರಿ ಇಲ್ಲ.
ನೀವು ಕಾಂಗ್ರೆಸ್ ಆಯ್ಕೆಮಾಡಿಕೊಂಡಲ್ಲಿ ನೀರಾವರಿ ಸಮಸ್ಯೆಯನ್ನು ಬುಡ ಸಮೇತ ಕಿತ್ತುಹಾಕಿ, ಶಾಶ್ವತ ಪರಿಹಾರ ಮಾಡಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

