ಗುಲ್ಬರ್ಗಾ

ನೀತಿ ಸಂಹಿತೆ ಉಲ್ಲಂಘನೆ; 48 ಪ್ರಕರಣ ದಾಖಲು

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯ ಪ್ರಯುಕ್ತ ಏ. 5 ರಿಂದ 27ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 48 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಏ. 27 ರಂದು ನೀತಿ ಸಂಹಿತೆ ಉಲ್ಲಂಘನೆಯ 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.
ವಿಧಾನಸಭಾವಾರು ಈವರೆಗೆ ದಾಖಲಾದ ನೀತಿ ಸಂಹಿತೆ ಉಲ್ಲಂಘನೆ ಪ್ರಕಣಗಳ ಸಂಖ್ಯೆ ವಿವರ ಇಂತಿದೆ. ಅಫಜಲ್ಪುರ-2, ಜೇವರ್ಗಿ-8, ಚಿತ್ತಾಪುರ(ಎಸ್.ಸಿ.)-2, ಸೇಡಂ-9, ಚಿಂಚೋಳಿ(ಎಸ್.ಸಿ.)-5, ಗುಲ್ಬರ್ಗ ಗ್ರಾಮೀಣ(ಎಸ್.ಸಿ.ಇ)-6, ಗುಲ್ಬರ್ಗ ದಕ್ಷಿಣ-9, ಗುಲ್ಬರ್ಗ ಉತ್ತರ-6, ಆಳಂದ-1.
ಊಟದ ವ್ಯವಸ್ಥೆ: ಏಪ್ರಿಲ್ 27 ರಂದು ನೀತಿ ಸಂಹಿತೆ ಉಲ್ಲಂಘನೆಯ 7 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವರ ಇಂತಿದೆ. ಜೇವರ್ಗಿ ಮತಕ್ಷೇತ್ರ ವ್ಯಾಪ್ತಿಯ ನೆಲೋಗಿ ಗ್ರಾಮದಲ್ಲಿ ಏ. 27ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯಸಿಂಗ್ ಅವರಿಂದ ಚುನಾವಣೆ ಆಯೋಗದ ಪರವಾನಿಗೆ ಪಡೆಯದೇ ಸಾರ್ವಜನಿಕರಿಗೆ ಊಟದ ವ್ಯವಸ್ಥೆಮಾಡಿದ್ದು, ಅಡುಗೆ ಸಹಿತ ಅಡುಗೆ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಹೆಬೂಬ್ ಸಾಬ್ ಮಂದೇವಾಲ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಗ್ರಾಮದಲ್ಲಿ ಚುನಾವಣಾ ಆಯೋಗದ ಪರವಾನಿಗೆ ಇಲ್ಲದೇ ಕಾಂಗ್ರೆಸ್ ಭಿತ್ತಿ ಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ ಬಗ್ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸದರಿ ಗ್ರಾಮದಲ್ಲಿ ಚುನಾವಣಾ ಆಯೋಗದ ಪರವಾನಗಿ ಇಲ್ಲದೇ ಬಿಎಸ್‌ಪಿ ಪಕ್ಷದ ಭಿತ್ತಿಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ ಬಗ್ಗೆ ಬಿಎಸ್‌ಪಿ ಅಭ್ಯರ್ಥಿ ಹುಸೇನ್ ಪಟೇಲ್ ಇಜೇರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೇವರ್ಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಪರವಾನಗಿ ಇಲ್ಲದೇ ಬಿಎಸ್‌ಪಿ ಭಿತ್ತಿಪತ್ರಗಳನ್ನು ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಪಾನ್‌ಶಾಪ್ ಗೋಡೆಗಳ ಮೇಲೆ ಅಂಟಿಸಿದ ಬಗ್ಗೆ ಬಿಎಸ್‌ಪಿ ಅಭ್ಯರ್ಥಿ ಹುಸೇನ್ ಪಟೇಲ್ ಇಜೇರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.