ಮಾಲಕರಡ್ಡಿ ಪ್ರಚಾರ
ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿ ಡಾ. ಎ.ಬಿ. ಮಾಲಕರಡ್ಡಿ ತಮ್ಮ ಬೆಂಬಲಿಗರೊಂದಿಗೆ ಭಾನುವಾರ ನಗರದ ವಿವಿಧ ವಾರ್ಡುಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ವಾರ್ಡ್ ಸಂಖ್ಯೆ 12, 13, 14ರಲ್ಲಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರ ಸಾಧನೆಗಳನ್ನು ಹಾಗೂ ಬಿಜೆಪಿ ಸರ್ಕಾರ ದುರಾಡಳಿತವನ್ನು ಮತದಾರರಿಗೆ ತಿಳಿಸಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಅವರೊಂದಿಗೆ ಪಕ್ಷದ ಮುಖಂಡರಾದ ಲಾಯಕ ಹುಸೇನ್ ಬಾದಲ್, ಇಬ್ರಾಹಿಂಸಾಬ್, ಶೇಖ್ ಜಹಿರೊದ್ದೀನ್, ಕಮಲ ಅಹ್ಮದ್, ಜಿಲಾನಿ ಇತರರು ಇದ್ದರು.
ಪಡುಕೋಟೆ ಪ್ರಚಾರ
ಶಹಾಪುರ: ಮತಕ್ಷೇತ್ರದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಪಡುಕೋಟೆಯವರು ತಾಲೂಕಿನ ಯಕ್ತಾಪುರ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವ ಮಹಾತ್ವಾಕಾಂಕ್ಷೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಕರಬಸಪ್ಪ ಬಿರಾಳ, ಜಿಲ್ಲಾ ಸಂಚಾಲಕ ಭೀಮಣ್ಣ ಶಖಾಪುರ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಸವಿತಾ ನಗನೂರು, ರಮೇಶ ಹೆಗ್ಗನದೊಡ್ಡಿ, ತಾಲೂಕಾಧ್ಯಕ್ಷ ಸಿ.ಅಬ್ದುಲ್ ಹಾದಿಮನಿ ಇತರರು ಇದ್ದರು.
'ತರಬೇತಿಗೆ ಹಾಜರಾಗಿ'
ಯಾದಗಿರಿ: ಜಿಲ್ಲೆಯ ವಿವಿಧ ಮತಕ್ಷೇತ್ರಗಳಲ್ಲಿ ಮತಗಟ್ಟೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಏ. 29ರಂದು ನಡೆಯುವ ತರಬೇತಿಗೆ ಹಾಜರಾಗುವಂತೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಸಂಬಂಧಪಟ್ಟ ನೌಕರರು ನೇಮಿಸಿರುವ ಆದೇಶಗಳನ್ನು ತಮ್ಮ ಕಚೇರಿ ಮುಖ್ಯಸ್ಥರಿಂದ ಪಡೆದು ಅಂದು ಸೂಚಿತ ಸ್ಥಳದಲ್ಲಿ ತಪ್ಪದೇ ತರಬೇತಿಗೆ ಹಾಜರಾಗಬೇಕು. ನೇಮಕಾತಿ ಆದೇಶಗಳು ತಲುಪದಿದ್ದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.
ಅಕ್ಕಮಹಾದೇವಿ ಸಾತ್ವಿಕ ಮಹಿಳೆ
ಯಾದಗಿರಿ: ಕನ್ನಡ ನಾಡಿನ ಪ್ರಥಮ ಕವಯತ್ರಿ ಎಂಬ ಅಭಿದಾನಕ್ಕೆ ಪಾತ್ರರಾಗಿರುವ ಅಕ್ಕಮಹಾದೇವಿಯವರ ಬದುಕು ಸಂಪೂರ್ಣವಾಗಿ ತ್ಯಾಗದಿಂದ ಕೂಡಿದ್ದಾಗಿದೆ. ಸಾತ್ವಿಕ ಶಕ್ತಿಯ ದಿಟ್ಟ ಹಾಗೂ ಧೀರ ಮಹಿಳೆ ಅವರು ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು. ತಾಲೂಕಿನ ಗಾಜರಕೋಟ ಗ್ರಾಮದ ಶಿವಶರಣ ಚನ್ನಪ್ಪಯ್ಯ ಸಾಂಸ್ಕೃತಿಕ ಸೇವಾ ಸಮಿತಿಯು ಶಿವಶರಣರ ಮಹಾಮನೆಯಲ್ಲಿ ಆಯೋಜಿಸಿದ್ದ ಅರಿವು- ಆಚಾರ ಕಾರ್ಯಕ್ರಮದಲ್ಲಿ, ಅಕ್ಕಮಹಾದೇವಿಯರ ಸ್ಮರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

