ಕೆಜೆಪಿಗೆ ಕ್ಯಾತನಾಳ, ಮುದ್ನಾಳಗೆ ಬಲ
ಯಾದಗಿರಿ: ರಾಜ್ಯವನ್ನು ಕಲ್ಯಾಣ ನಾಡನ್ನಾಗಿ ಮಾಡುವ ಕನಸನ್ನು ಯಡಿಯೂರಪ್ಪ ಹೊಂದಿದ್ದರೆ ಆ ಪಕ್ಷದಿಂದ ಸ್ಪರ್ಧಿಸುತ್ತಿರುವ ನಾನು ಗುರಮಠಕಲ್ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಹೆಬ್ಬಯಕೆ ಹೊಂದಿದ್ದೇನೆ. ಆದ್ದರಿಂದ ನಿಮ್ಮ ಮುಂದೆ ಮತ ಯಾಚಿಸುತ್ತಿದ್ದು, ಮತದಾರರು ಆಶೀರ್ವದಿಸಬೇಕು ಎಂದು ಕೆಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮನವಿ ಮಾಡಿದರು. ಮತಕ್ಷೇತ್ರದ ದುಪ್ಪಲ್ಲಿ ಗ್ರಾಮದಲ್ಲಿ ಭಾನುವಾರ ಕೆಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಅವರು ಬಿಜೆಪಿ ತೊರೆದು ಕೆಜೆಪಿ ಸೇರಿದರು. ಕಳೆದ 5 ವರ್ಷಗಳ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಯಾದಗಿರಿಗೆ ಬಂದಾಗ ಕೊಟ್ಟ ಮಾತಿನಿಂತೆ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಅದರಂತೆ ಈ ಬಾರಿಯೂ ಗುರಮಠಕಲ್ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ವಾಗ್ದಾನ ಮಾಡಿದ್ದಾರೆ. ಕ್ಯಾತನಾಳ ಮಾತನಾಡಿ, ನಾನು ಎಂದಿಗೂ ಮುದ್ನಾಳ ಮನೆತನದ ಸದಸ್ಯ. ಕೆಲವೊಂದು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಇಷ್ಟು ದಿನ ಚುನಾವಣಾ ಪ್ರಚಾರದಿಂದ ದೂರ ಉಳಿದಿದೆ. ಅಮೀನರಡ್ಡಿ, ಭೀಮರಾಯ ಬದ್ದೇಪಲ್ಲಿ, ಪ್ರಕಾಶ ಸೈದಾಪುರ, ಮಲ್ಲನಗೌಡ ದುಪ್ಪಲ್ಲಿ, ಮಲ್ಲನಗೌಡ ಹತ್ತಿಕುಣಿ, ತಾಯಪ್ಪ ಬದ್ದೆಪಲ್ಲಿ, ಸೂಗಪ್ಪ ಕಡೇಚೂರ, ಶ್ರೀಧರ ಘಂಟಿ, ನಾಗರಡ್ಡಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

