ಗುಲ್ಬರ್ಗಾ

ನಗರದಲ್ಲಿ ಮೀನು ಮಾರಾಟ ಮಳಿಗೆ ನಿರ್ಮಿಸಿ

Published On :

ಯಾದಗಿರಿ: ನಗರದಲ್ಲಿ ಮೀನು ಮಾರಾಟಕ್ಕೆ ಅನುಕೂಲ ಕಲ್ಪಿಸಲು ಮಳಿಗೆ ನಿರ್ಮಿಸಿ ಕೊಡಬೇಕು ಹಾಗೂ ಸಾಲ ಸೌಲಭ್ಯ ನೀಡಬೇಕೆಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ನೇತೃತ್ವದಲ್ಲಿ ಶನಿವಾರ ಮೀನುಗಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಮುದ್ನಾಳ, ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ಹರಿಯುತ್ತಿದ್ದು ನೂರಾರು ಬೃಹತ್ ಕೆರೆಗಳಿವೆ. ಇವುಗಳಲ್ಲಿ ವಿವಿಧ ಜಾತಿಗಳ ಮೀನುಗಳು ಸಿಗುತ್ತಿವೆ. ಹೀಗಾಗಿ ಮೀನುಗಳನ್ನು ಸಾಕುವವರು, ಹಿಡಿಯುವವರು ಹಾಗೂ ಮಾರಾಟ ಮಾಡುವವರು ಮತ್ತು ಮೀನುಗಳನ್ನು ತಮ್ಮ ಮುಖ್ಯ ಆಹಾರವನ್ನಾಗಿ ಸೇವಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಅಪಾರವಾಗಿದೆ.
ಮೀನು ಮಾರಾಟ ಮಳಿಗೆ ಸ್ಥಾಪಿಸಿ: ಆದರೆ ಮೀನು ಮಾರಾಟಕ್ಕೆ ಸಮರ್ಪಕವಾದ ಮೀನು ಮಾರಾಟ ಮಳಿಗೆ ಇಲ್ಲ. ಹೀಗಾಗಿ ಕೊಳಚೆ ಪ್ರದೇಶದಲ್ಲಿ ಕುಳಿತು ಮತ್ತು ತಲೆ ಮೇಲೆ ಹೊತ್ತುಕೊಂಡು ಮೀನು ಮಾರಾಟ ಮಾಡುವಂತಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ವಿಶೇಷ ಗಮನಹರಿಸಿ ನಗರದಲ್ಲಿ ಮೀನು ಮಾರಾಟ ಮಳಿಗೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಅಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಸಾಲ ಸೌಲಭ್ಯಕ್ಕೆ ಆಗ್ರಹ: ಮೀನುಗಾರರಿಗೆ ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಇತರೆ ಸಹಾಯಧನ ಸಿಗುವಂತಾಗಬೇಕೆಂದು ಅವರು ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಖಂಡಪ್ಪ, ಮಲ್ಲು ಪೂಜಾರಿ, ಹಣಮಂತ, ಪಾಂಡು, ಮರೆಪ್ಪ, ಕೃಷ್ಣ, ಸಿದ್ದಪ್ಪ ನಾಲಡಗಿ, ಪ್ರಭು ಕೋಡಾಲ, ಮಹಾದೇವಪ್ಪ ಜೋಳದಡಿಗಿ, ಹಣಮಂತ ಗೌಡಗೇರಿ, ಭೀಮರಾಯ ಗಣಪೂರ, ಇಮಾಮಸಾಬ ಸೈದಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.