ರಸ್ತೆ ಕಾಮಗಾರಿಗೆ ಅವಳಿ ಶಾಸಕರಿಂದ ಚಾಲನೆ
ಕನ್ನಡಪ್ರಭ ವಾರ್ತೆ , ಜೇವರ್ಗಿ , ಆ.6
ತಾಲೂಕಿನ ಕೊಂಡಗೂಳಿ ಗ್ರಾಮದಿಂದ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಹಾಗೂ ಸಿಂದಗಿ ಶಾಸಕ ರಮೇಶ ಭೂಸನೂರ ಅವರು ಎರಡು ತಾಲೂಕಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ತಾಲೂಕಿನ ಗಡಿ ಗ್ರಾಮವಾದ ಕೊಂಡಗೂಳಿಯಲ್ಲಿ ಪ್ರಸಕ್ತ 2013-14ನೇ ಸಾಲಿನ ಕ್ಯಾಪಿಟಲ್ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಂದಗಿ ತಾಲೂಕಿನ ಯಂಕಂಚಿ, ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದ ವರೆಗಿನ 3.8 ಕಿ.ಮೀ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕಾಮಗಾರಿ ಚಾಲನೆ ನೀಡಿದ ನಂತರ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ಜನತೆಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ನಿರ್ಮಾಣ, ಗ್ರಾಮೀಣ ಬಾಗದ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ತಾವು ಕೂಡ ಹೆಚ್ಚಿನ ಒತ್ತು ನೀಡಿ ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕಳೆದ ಭಾರಿ ಬಿಜೆಪಿ ಸರ್ಕಾರದಲ್ಲಿ ಸಿಂದಗಿ ಹಾಗೂ ಜೇವರ್ಗಿ ತಾಲೂಕಿನ ಗಡಿ ಗ್ರಾಮಗಳ ಕುರಿತು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದ್ದಾಗಿದೆ. ಇನ್ನು ಮುಂದೆ ನಿಮ್ಮ ಸರದಿ ಎಂದು ಡಾ. ಅಜಯಸಿಂಗ್ ಅವರಿಗೆ ಉದ್ದೇಶಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತರಾಯಗೌಡ ವಡಗೇರಿ, ಶಾಂತಗೌಡ ದುಮ್ಮದ್ರಿ, ಖಾಸಿಂಪಟೇಲ್ ಮುದಬಾಳ, ಗೋಲಾಳಪ್ಪಗೌಡ ಮಾಗಣಗೇರಿ, ಚಂದ್ರಶೇಖರ ಪುರಾಣಿಕ, ಮಲ್ಲಾರಾವ ಕುಲಕರ್ಣಿ, ಗೌಡಪ್ಪಗೌಡ ಮಾಲಿಪಾಟೀಲ್, ಸೋಮನಗೌಡ ಪಾಟೀಲ್, ಬಸವರಾಜ ಕೋಳಕೂರ, ಬಂಡೇಪ್ಪಗೌಡ, ಕೇಶರಾಯಗೌಡ, ಮಹಿಬೂಬ್ ಮುಲ್ಲಾ, ಮಲ್ಲಣ್ಣಗೌಡ ಬಿರಾದಾರ, ಬಸವರಾಜ ಪಾಟೀಲ ಯಡ್ರಾಮಿ, ಚಂದ್ರಕಾಂತಗೌಡ ಮಾಗಣಗೇರಾ, ಭೀಮಾರಾಯಗೌಡ, ಬಿಂದುರಾಯಗೌಡ ಯಡ್ರಾಮಿ, ರುದ್ರಗೌಡ ಪಾಟೀಲ್ ಸೇರಿದಂತೆ ಜೇವರ್ಗಿ ಹಾಗೂ ಸಿಂದಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಧರು ಪಾಲ್ಗೊಂಡಿದ್ದರು. ಸೋಮನಗೌಡ ಪಾಟೀಲ್ ಸ್ವಾಗತಿಸಿದರು. ಜಿ.ಜಿ. ಪಾಟೀಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

