ಹೈ.ಕ. ಪ್ರತ್ಯೇಕ ರಾಜ್ಯ ಕೂಗು ಸಲ್ಲದು: ಶರಣು ಗದ್ದುಗೆ
ಗುಲ್ಬರ್ಗ: ಕರ್ನಾಟಕ ಏಕೀಕರಣಕ್ಕಾಗಿ ಪಟ್ಟ ಶ್ರಮವನ್ನು ನೆನಪಿಸಿಕೊಂಡು ಅಖಂಡ ಕರ್ನಾಟಕದ ಅಭ್ಯುದಯವನ್ನು ಬಯಸಬೇಕೇ ಹೊರತು ಕರ್ನಾಟಕವನ್ನು ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಎಂದು ಕರ್ನಾಟಕದ ಯಾವ ವ್ಯಕ್ತಿಯೂ ನೀಡುವ ಛಿದ್ರಗೊಳಿಸುವ ಹೇಳಿಕೆಗಳು ಸಲ್ಲದು ಎಂದು ಕರವೇ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಡಿನಲ್ಲಿರುವ ಎಲ್ಲ ಸಂಘ ಸಂಸ್ಥೆಗಳು ಇಂತಹ ಹೇಳಿಕೆಗಳನ್ನು ತಿರಸ್ಕರಿಸಬೇಕು. ಎಂದಿಗೂ ಕರ್ನಾಟಕವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಬಾರದೆಂದು ಮನವಿ ಮಾಡಿದ್ದಾರೆ.
ಹೈ-ಕ ಭಾಗಕ್ಕೆ ಇದುವರೆಗಿನ ಕೋರಿಕೆಯಾದ 371(ಜೆ)ನೇ ಕಲಂ ತಿದ್ದುಪಡಿಯಲ್ಲಿನ ಆಗು ಹೋಗುಗಳ ಕುರಿತು ಸಂಪೂರ್ಣ ಮಾಹಿತಿಯ ನಂತರ ಅದಕ್ಕೆ ಸಂಬಂಧಪಟ್ಟ ಮೀಸಲಾತಿಯ ಲಾಭ- ಹಾನಿಯನ್ನು ಚರ್ಚಿಸಿ ಅದಕ್ಕಾಗಿ ಮತ್ತೊಮ್ಮೆ ಹೋರಾಟ ಮಾಡಲು ಸಿದ್ಧರಾಗಬೇಕೇ ಹೊರತು ಅದರಲ್ಲಿನ ಸಣ್ಣ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಧ್ವಜಾರೋಹಣ ಮಾಡುವುದಾಗಲಿ, ಪ್ರತ್ಯೇಕ ರಾಜ್ಯದ ಕೂಗು ಎಂಬ ಗೊಂದಲದ ಹೇಳಿಕೆ ನೀಡುವುದರಿಂದ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವ ಕಾರ್ಯ ಕೈಬಿಡಲು ಗದ್ದುಗೆಯವರು ಪ್ರಕಟಣೆ ಮೂಲಕ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

