ಗುಲ್ಬರ್ಗಾ

ನಗರಸಭೆ ನಿರ್ಲಕ್ಷ್ಯ: ಕೊಳಚೆ ತುಂಬಿದ ರಸ್ತೆ, ಜನರ ಆಕ್ರೋಶ

Published On :

ಯಾದಗಿರಿ: ರಸ್ತೆಯ ಮಧ್ಯೆ ಗುಂಡಿ. ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆಯಲ್ಲಾ ರಸ್ತೆಯ ಮೇಲೆ. ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗುವ ಪರಿಸ್ಥಿತಿ. ಇದು ನಗರಸಭೆಯ ಕಾರ್ಯವೈಖರಿಗೆ ಕೈಗನ್ನಡಿ.
ಚರಂಡಿಯಿಲ್ಲ: ನಗರದ ತರಕಾರಿ ಮಾರುಕಟ್ಟೆಯ ಹಿಂದಿನ ವಾರ್ಡ್ ನಂ. 3ರಲ್ಲಿನ ಬುಡಬುಡಕೆಯವರ ಬಡಾವಣೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಮಧ್ಯೆ ನಿರ್ಮಿಸಿದ ಸೇತುವೆ ಕೊಚ್ಚಿ ಹೋಗಿ ದೊಡ್ಡ ತಗ್ಗು ಸೃಷ್ಟಿಯಾಗಿದೆ. ಸುಸಜ್ಜಿತ ಚರಂಡಿಯಿಲ್ಲದ ಕಾರಣ ಕೊಳಚೆ ನೀರೆಲ್ಲ ರಸ್ತೆಯನ್ನು ಆವರಿಸಿದೆ. ಹೀಗಾಗಿ ಜನರು ಇದೇ ಕೊಳಚೆ ರಸ್ತೆಯ ಮೇಲೆ ಜೀವ ಕೈಯಲ್ಲಿ ಹಿಡಿದು ನಗರಸಭೆಗೆ ಹಿಡಿ ಶಾಪ ಹಾಕುತ್ತ ಓಡಾಡುತ್ತಾರೆ.
  ವಾಹನ ಚಾಲಕರು ರಾತ್ರಿ ಸ್ವಲ್ಪ ಮೈ ಮರೆತರೂ ಪ್ರಾಣಕ್ಕೆ ಕಂಟಕ ತಪ್ಪಿದ್ದಲ್ಲ. ಮಕ್ಕಳು ಮತ್ತು ವೃದ್ಧರು ರಾತ್ರಿ ಸಮಯದಲ್ಲಿ ಆಯತಪ್ಪಿ ಕಾಲು, ಕೈ ಮುರಿದುಕೊಂಡರೂ ಅಚ್ಚರಿಯಿಲ್ಲ.
ಆತಂಕದ ಸಂಚಾರ: ಈ ರಸ್ತೆ ಮೇಲೆ ಸಾಕಷ್ಟು ಜನ ತಿರುಗಾಡುತ್ತಾರೆ. ಹತ್ತಿರದಲ್ಲಿ ಹನುಮಾನ್ ಮಂದಿರವಿದೆ. ಅಲ್ಲದೆ ತರಕಾರಿ ಮಾರುಕಟ್ಟೆ ಇರುವುದರಿಂದ ಜನರ ಓಡಾಟ ಹೆಚ್ಚಾಗಿದೆ. ರಸ್ತೆ ಬಿರುಕುಗೊಂಡ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯವಿದೆ. ಅದರ ಹೊಲಸು ನೀರು ಇದೇ ಚರಂಡಿಗೆ ಬರುತ್ತದೆ. ಹೀಗಾಗಿ ಬಡಾವಣೆಯಲ್ಲಿ ಕಲುಷಿತ ವಾತಾವರಣ ಸೃಷ್ಟಿಸಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಬಡಾವಣೆ ನಿವಾಸಿಗಳ ದೂರು.
ಈಗಲಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತು, ರಸ್ತೆ ದುರವಸ್ಥೆಯನ್ನು ಗಮನಿಸಿ, ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅಪಘಾತಕ್ಕೆ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂಬುದು ಜನರ ಅಭಿಮತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.