ಮಾತೃ ಭಾಷೆ ಭಾವನೆಗಳ ಕನ್ನಡಿ: ಸತ್ಯಂಪೇಟೆ
ಶಹಾಪುರ: ಜಾಗತಿಕ ಸಾಹಿತ್ಯಕ್ಕೆ ಕನ್ನಡ ಭಾಷೆಯ ಕೊಡುಗೆ ಅಪಾರವಾದುದು. ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಹಳೆಯದಾದ ಹಾಗೂ ಸತ್ವಯುತವಾದ ಭಾಷೆ ಕನ್ನಡ. ಮಡಿವಂತಿಕೆಯನ್ನು ಬಿಟ್ಟು ಅನ್ಯಭಾಷೆಯ ಪದಗಳನ್ನು ಕನ್ನಡ ಒಳಗೊಳ್ಳುತ್ತ ಹೋಗುವುದರಿಂದ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚುತ್ತದೆ ಎಂದು ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ತಾಲೂಕಿನ ಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಗೌರಮ್ಮ ಮತ್ತು ಬಸವಲಿಂಗಪ್ಪಗೌಡ ದತ್ತಿ ಉಪನ್ಯಾಸ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಬೆಳೆಸುವುದು ಉಳಿಸುವುದು ಎಂಬ ವಿಷಯ ಕುರಿತು ಮಾತನಾಡಿದರು.
ಸತ್ಯಂಪೇಟೆ ಕನ್ನಡ ಭಾಷೆ ಅನ್ನಕೊಡುವ ಭಾಷೆಯಾದಾಗ ಕನ್ನಡ ಬೆಳೆಯುತ್ತದೆ. ಇಂಗ್ಲಿಷ್ ಬಗೆಗೆ ನಮಗೆಷ್ಟೆ ವ್ಯಾಮೋಹವಿದ್ದರೂ ನಮ್ಮ ತಾಯಿ ಭಾಷೆಯನ್ನು ಕಡೆಗಣಿಸಬಾರದು. ಮಾತೃ ಭಾಷೆಯಲ್ಲಿ ನಮ್ಮ ಮನಸ್ಸಿನ ಭಾವಗಳನ್ನು ಅತ್ಯಂತ ಸಶಕ್ತವಾಗಿ ಕಟ್ಟಿಕೊಡುವಷ್ಟು ಬೇರೆ ಭಾಷೆಯಲ್ಲಿ ಚಿತ್ರಿಸಲು ಸಾಧ್ಯವಿಲ್ಲವೆಂದರು.
ಕನ್ನಡ ಭಾಷೆಗೆ ಮಹತ್ವದ ಕೊಡುಗೆ: ನಾಡಿನ ಜನಪದರು ತಮ್ಮ ಕಾಯಕಗಳನ್ನು ಮಾಡುತ್ತಲೇ ಕನ್ನಡ ಭಾಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡದಲ್ಲಿರುವ ವಚನ ಸಾಹಿತ್ಯ, ದಾಸ ಸಾಹಿತ್ಯ, ವಿಚಾರ ಸಾಹಿತ್ಯ ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳಾಗಿವೆ ಎಂದು ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ ಶಾಷಿಸಿದರು.
ಇದೇ ಸಂದರ್ಭದಲ್ಲಿ ಸಗರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಲಿಂಗಣ್ಣ ಪಡಶೆಟ್ಟಿಯವರನ್ನು ಕನ್ನಡ ಧ್ವಜಕೊಡುವ ಮೂಲಕ ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ ಸತ್ಕರಿಸಿದರು.
ವೇದಿಕೆಯಲ್ಲಿ ಶರಣಪ್ಪ ಸಜ್ಜನ್, ಬಸನಗೌಡ ಪಾಟೀಲ, ಶಿವಲಿಂಗಣ್ಣಗೌಡ, ಮಲ್ಲಿಕಾರ್ಜುನ ಇದ್ದರು. ಶೇಖರಪ್ಪ ಮಾಸ್ತರ ಸಗರ ಸ್ವಾಗತಿಸಿದರು. ಶಿವಶರಣಪ್ಪ ನಾಗಲೋಟ ನಿರ್ವಹಿಸಿದರು.
ಸಭೆಯಲ್ಲಿ ಡಾ. ದೇವಿಂದ್ರಪ್ಪ ಹಡಪದ, ಸಾಯಬಣ್ಣ ಮಡಿವಾಳರ್, ಗುರುಸಂಗಪ್ಪ ದೇಸಾಯಿ, ಶಿವಣ್ಣ ಇಜೇರಿ, ಕು. ನಾಗರತ್ನ ಗುಂಡಾನೋರ್, ಶಿವಲಿಂಗಣ್ಣಗೌಡ, ಎಸ್.ಜಿ. ಮುದ್ದಾ, ಯಲ್ಲಪ್ಪ ಗಡ್ಡೆ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

