ಗುಣಮಟ್ಟದ ಶಿಕ್ಷಣ ಕೊಡಿಸುವಿಕೆ ಅಗತ್ಯ
ಕೆಂಭಾವಿ: ದುಂದುವೆಚ್ಚ ಮಾಡದೆ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವುದು ಬಹಳ ಮುಖ್ಯ. ಶಿಕ್ಷಣ ಕಲಿತ ಪ್ರತಿಯೊಂದು ಮಗು, ಮುಂದೆ ಬಂದು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಕೆನರಾ ಬ್ಯಾಂಕ್ ಉದ್ಯೋಗಿ ಧರ್ಮಣ್ಣ ಹುಲಿಕಾರ ಹೇಳಿದರು.
ಪಟ್ಟಣ ಸಮೀಪದ ಚಿಂಚೋಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟಿಸಿ, ಸಮಾಜದ ಓರೆಕೋರೆಗಳನ್ನು ತಿದ್ದಬೇಕಾದರೆ ಶಿಕ್ಷಣ ಅತ್ಯವಶ್ಯ ಅದಕ್ಕಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಡಿಎಸ್ಎಸ್ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರಣಪ್ಪ ದಖನಿ, ಮಲ್ಲಿಕಾರ್ಜುನ ತಳ್ಳಳ್ಳಿ, ಶಿವಲಿಂಗ, ಮಾನಯ್ಯ, ನಿಂಗಣ್ಣ, ತಿಪ್ಪಣ್ಣ, ವೀರಭದ್ರ, ಶರಣಪ್ಪ ಗಯಕವಾಡ, ಚನ್ನಬಸ್ಸು ಬೊಮ್ಮನಹಳ್ಳಿ, ಗ್ರಾಪಂ ಸದಸ್ಯ ಮಡಿವಾಳಪ್ಪ ದೊಡಮನಿ, ಜಗದೀಶ, ಹವಳಪ್ಪ ಮುಂತಾದವರು ಉಪಸ್ಥಿತರಿದ್ದರು. ಜೆಟ್ಟೆಪ್ಪ ನಾಗರಾಳ ಸ್ವಾಗತಿಸಿ, ಮಹೇಶ ನಿರೂಪಿಸಿ, ಮಾನಪ್ಪ ವಂದಿಸಿದರು. ನಂತರ ನಡೆದ ಸಭೆಯಲ್ಲಿ ಡಿಎಸ್ಸೆಸ್ ಪದಾಧಿಕಾರಿಗಳಾಗಿ ಅಂಬೇಡ್ಕರ್ ದೊಡ್ಡಮನಿ (ಸಂಚಾಲಕ), ಸಂಗಪ್ಪ ಹೊಸಮನಿ, ಸಿದ್ದಪ್ಪ ದೊಡಮನಿ, ಧರ್ಮಸಿಂಗ ಹೊಸಮನಿ, ಪರಶುರಾಮ ದೊಡಮನಿ (ಸಂ. ಸಂಚಾಲಕರು) ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

