ಗಂಧದ ಕಟ್ಟಿಗೆ ಕಳ್ಳ ಸಾಗಣೆ: ಮೂವರ ಬಂಧನ
ಗುಲ್ಬರ್ಗ: ಆಳಂದ ತಾಲೂಕಿನ ಮದಗುಣಕಿ ಕ್ರಾಸ್ ಹತ್ತಿರ ಶ್ರೀಗಂಧದ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದನಹಿಪ್ಪರಗಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿ, ಶಕಾಪುರದ ಜೀವು ತಂದೆ ಲೋಹನ ಕಾಳೆ, ಝಳಕಿ ಬಿ ಗ್ರಾಮದ ವಾಲ್ಕು ತಂದೆ ಸಕಾರಾಮ ಪವಾರ ಮತ್ತು ಸಕಾರಾಮ ತಂದೆ ಕಲ್ಲಪ್ಪ ಪವಾರ ಎಂಬುವರನ್ನು ಬಂಧಿಸಿ ಅವರಿಂದ 16 ಸಾವಿರ ರು. ಮೌಲ್ಯದ ಶ್ರೀಗಂಧದ ಕಟ್ಟಿಗೆ ಜಪ್ತಿ ಮಾಡಿದ್ದಾರೆ. ಈ ಕುರಿತು ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಗುಲ್ಬರ್ಗ: ನಗರದ ರೇಲ್ವೆ ನಿಲ್ದಾಣದ ಪ್ಲಾಟ್ ನಂ. 2ರಲ್ಲಿ 55 ವರ್ಷದ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಸಾದಾ ಕಪ್ಟುಬಣ್ಣ, ದಪ್ಪ ಮೂಗು, ಕೋಲು ಮುಖ ಹೊಂದಿದ್ದು, ಕರಿ ಬಿಳಿ ಮಿಶ್ರಿತ ತಲೆಗೂದಲಿವೆ. ಕ್ರೀಮ್ ಕಲರ್ ಶರ್ಟ, ಕೆಂಪು ಕರಿ ಗೆರೆ ಮಿಶ್ರಿತ ಲುಂಗಿ ಧರಿಸಿದ್ದು, ಕೊರಳಲ್ಲಿ ಕಂದು ಬಣ್ಣದ ಮಣಿಸರವಿದೆ. ಬ್ರೌನ್ ಕಲರ್ ಸ್ವೆಟರ್ ಧರಿಸಿದ್ದಾನೆ. ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ವಾಡಿ ರೇಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಪತಿ ಮತ್ತು ಮಾವ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ಶಹಾಬಾದ್ನಲ್ಲಿ ನಡೆದಿದೆ. ಅಶ್ವಿನಿ ಗಂಡ ಅಡಿವೆಪ್ಪ ಸಜ್ಜನಶೆಟ್ಟಿ ಎಂಬ ಮಹಿಳೆ ಈ ಕುರಿತು ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಶ್ವಿನಿಗೆ ಪತಿ ಅಡಿವೆಪ್ಪ, ಮಾವ ಬಸವರಾಜ ಅವರು ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಕಿರುಕುಳಕ್ಕೊಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

