ಮನೆಯಲ್ಲೇ ಮಕ್ಕಳ ಕಲಿಕೆ ಹೆಚ್ಚು: ಹಫೀಜ್
ಕನ್ನಡಪ್ರಭ ವಾರ್ತೆ , ಯಾದಗಿರಿ , ಆ.16
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಗಿಂತ ಮಗು ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತದೆ. ಆದ್ದರಿಂದ ಪಾಲಕರು ಮನೆಯಲ್ಲಿ ಮಕ್ಕಳ ಓದಿನ ಬಗ್ಗೆ ನಿಗಾ ಇಡಬೇಕೆಂದು ಶಿಕ್ಷಣ ಇಲಾಖೆ ವಲಯ ಸಂಪನ್ಮೂಲ ವ್ಯಕ್ತಿ ಹಫೀಜ್ ಪಟೇಲ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಆಶ್ರಯದಲ್ಲಿ ಬೊಮಮ್ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವರ್ಷದ ಮೊದಲ ಪಾಲಕರ ಸಭೆ ಹಾಗೂ ಶಾಲಾ ಹಂತದ ಪುಸ್ತಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರ ನಿಗಾಯಿರಲಿ: ಶಾಲೆಯ ಗುಣಮಟ್ಟದ ಶಿಕ್ಷಣವು ಪಾಲಕರು, ಎಸ್ಡಿಎಂಸಿ ಹಾಗೂ ಶಿಕ್ಷಕರ ಮೇಲೆ ಅವಲಂಬಿತವಾಗಿದೆ. ಮನೆಯಲ್ಲಿ ಕಲಿಸುವುದು, ಅವರ ಮೇಲೆ ನಿಗಾ ಇಡುವ ಕೆಲಸವನ್ನು ಪಾಲಕರು ಮಾಡಬೇಕು. ಇಲ್ಲವಾದಲ್ಲಿ ಮಕ್ಕಳು ಕಲಿಯುವುದಿಲ್ಲ. ಶಾಲೆಯಲ್ಲಿ ಕಲಿತ ವಿಷಯಗಳ ಬಗ್ಗೆ ಮನವರಿಕೆ ಮಾಡಲು ಸಮುದಾಯ ಬಹಳ ಅವಶ್ಯಕತೆಯಿದೆ. ನಾವು ಈಗಾಗಲೇ ಶಿಕ್ಷಣದಿಂದ ವಂಚಿತರಾಗಿ ಬಹಳ ಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಮಕ್ಕಳೂ ಅದನ್ನು ಅನುಭವಿಸದೇ ಇರಲಿ ಎಂದು ಹೇಳಿದರು.
ವಿಶೇಷ ಬೋಧನಾ ವ್ಯವಸ್ಥೆ: ಶಾಲೆಯ ಶಿಕ್ಷಕ ಶೇಖ್ ಅಲಿ ಮಾತಾನಾಡಿ, ಶಾಲೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ಬೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯದ ಬಲವರ್ಧನೆಗೆ ಪುಸ್ತಕ ಮೇಳ ಮಾಡಿ ಮಕ್ಕಳಿಗೆ ಪುಸ್ತಕ ನೀಡಲಾಗುತ್ತಿದೆ. ಇಂಗ್ಲಿಷ್ ಭಾಷಾ ಬಲವರ್ಧನೆಗೂ ಯೋಜನೆ ರೂಪಿಸಲಾಗಿದ್ದು, ಅದು ಉತ್ತಮ ಫಲಿತಾಂಶ ಕಂಡಿದೆ ಎಂದರು.
ಮೇಳದ ಸದುಪಯೋಗಕ್ಕೆ ಕರೆ: ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ನ ಯೋಜನಾ ನಿರ್ದೇಶಕ ರಮೇಶ ಮಾತನಾಡಿ, ಸಂಸ್ಥೆಯ ಕಾರ್ಯಕ್ರಮಗಳು ಈ ಶಾಲೆಯಲ್ಲಿ ಹೇಗೆ ಸಂಪೂರ್ಣವಾದ ಪರಿಣಾಮ ಬೀರುತ್ತಿವೆ ಎನ್ನುವುದರ ಬಗ್ಗೆ ತಿಳಿಸಿದರು. ಪುಸ್ತಕ ಮೇಳದಲ್ಲಿ ಮಕ್ಕಳು, ಪಾಲಕರು ಭಾಗವಹಿಸಿ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮುಖ್ಯಗುರು ಚಂದ್ರಾಮಪ್ಪ ಮಾತನಾಡಿದರು. ಅಮೆರಿಕದಿಂದ ಆಗಮಿಸಿದ್ದ ಸಂಶೋಧಕರಾದ ಕುಮಾರ ಸಾಹಾ, ಶಿಕ್ಷಕರಾದ ವಿಶ್ವನಾಥ, ಸುಧೀರ್ ನಾಗೂರೆ, ಸಂಯೋಜಕ ಮೌನೇಶ, ಎಸ್ಡಿಎಂಸಿ ಅಧ್ಯಕ್ಷೆ ಸೈಯದ್ ಭಾಷಾ, ಚಂದ್ರಕಾಂತ ಸಿಂಗನಳ್ಳಿ, ರತನ್ ಟಾಟಾ ಟ್ರಸ್ಟ್ನ ಸಲೀಂ ಇದ್ದರು. ಸಂಯೋಜಕ ಕೆ.ಎಂ. ವಿಶ್ವನಾಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಳಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

